ಹಿರಿತಲೆಗಳು ಅಖಾಡಕ್ಕೆ:ಯಡಿಯೂರಪ್ಪಗೆ ನಡುಕ ಶುರು

ಇಂತಹ ಒಂದು ಬೆಳವಣಿಗೆಗೆ ಚಾಲನೆ ನೀಡಿರುವುದು ಯಡಿಯೂರಪ್ಪನವರ ಮತ್ತೊಬ್ಬ ವಿರೋಧಿ ಎಂದೇ ಪರಿಗಣಿತರಾಗಿರುವ ಹಿರಿಯ ಸೇನಾನಿ ಎಲ್ ಕೆ ಅಡ್ವಾಣಿ ಎಂಬುದು ಕುತೂಹಲಕಾರಿಯಾಗಿದೆ.
ಬಿಜೆಪಿ ಹಿರಿಯ ವೇದಿಕೆಯ ಗೌರವಾಧ್ಯಕ್ಷ ಬಿಬಿ ಶಿವಪ್ಪ ನೇತೃತ್ವದ ಹಿರಿಯ ತಲೆಗಳು ದೆಹಲಿಗೆ ತೆರಳಲಿವೆ. ವೇದಿಕೆಯ ಕಾರ್ಯಾಧ್ಯಕ್ಷ ಗೋವಿಂದಪ್ಪ, ಅಧ್ಯಕ್ಷ ಉರಿಮಜಲು ರಾಮಭಟ್, ಹಾಗೂ ಪ್ರಧಾನ ಕಾರ್ಯದರ್ಶಿ ಅಣ್ಣಾ ವಿನಯಚಂದ್ರ ನಿಯೋಗದಲ್ಲಿದ್ದಾರೆ. ಮಾರ್ಚ್ 27ರಂದು ತನ್ನನ್ನು ಭೇಟಿಯಾಗುವಂತೆ ಖುದ್ದು ಅಡ್ವಾಣಿಯವರೇ ಈ ಹಿರಿಯರಿಗೆ ಸೂಚಿಸಿದ್ದಾರೆ.
ಮಾರ್ಚ್ 28ರಂದು ಇತರೆ ಪ್ರಮುಖರಾದ ನಿತಿನ್ ಗಡ್ಕರಿ, ಮುರಳಿ ಮನೋಹರ ಜೋಶಿ, ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಜತೆಯೂ ಮಾತುಕತೆ ನಡೆಸಲಿದ್ದಾರೆ. ಆನಂತರ ಾರ್ ಎಸ್ ಎಸ್ ಸಹಕಾರ್ಯವಾಹ ಸುರೇಶ್ ಜೋಶಿ ಅವರನ್ನೂ ಭೇಟಿ ಮಾಡಲಿದೆ. ಒಟ್ಟಿನಲ್ಲಿ ಯಡಿಯೂರಪ್ಪಗೆ ಅಧಿಕಾರ ಮರಳಿಸಲು ವಿಳಂಬ ಸೂತ್ರ ಅನುಸರಿಸುತ್ತಿರುವ ಬಿಜೆಪಿ ಹೈಕಮಾಂಡ್, ಇದೀಗ ಹಿರಿಯರಿಗೂ ಮಣೆಹಾಕಿರುವುದು ಯಡಿಯೂರಪ್ಪಗೆ ದೊಡ್ಡ ತಲೆನೋವಾಗಿದೆ.












Click it and Unblock the Notifications