ಬಿಜೆಪಿಗಾಗಿ 2ಜಿ ಹಗರಣದ ಹಣಕ್ಕೆ ಕೈಯೊಡ್ಡಿದ್ದ ಜೋಶಿ

ಇದಕ್ಕಾಗಿ ಪಿಎಸಿ ಸ್ಪೆಕ್ಟ್ರಂ ಹಗರಣದ ತನಿಖೆ ನಡೆಸುತ್ತಿದ್ದ ಸಮಯದಲ್ಲಿ ಜೋಶಿ ಅನಿವಾಸಿ ಭಾರತೀಯ ಅಂಶುಮಾನ್ ಮಿಶ್ರಾ ಅವರ ಮೊರೆಹೋಗಿದ್ದರು ಎನ್ನಲಾಗಿದೆ. '2004 ಮತ್ತು 2009ರ ಲೋಕಸಭಾ ಚುನಾವಣೆಗಳ ವೇಳೆ ಹಣಕ್ಕಾಗಿ ಜೋಶಿ ಪದೇ ಪದೆ ತನ್ನಲ್ಲಿಗೆ ಬರುತ್ತಿದ್ದರು. ಇದಕ್ಕೆ ಅವರು ತನ್ನ ಜತೆ ನಡೆಸಿದ ದೂರವಾಣಿ ಸಂಭಾಷಣೆಗಳೇ ಸಾಕ್ಷ್ಯವಾಗಿವೆ' ಎಂದು ಮಿಶ್ರಾಖಾಸಗಿ ಟಿವಿ ಚಾನೆಲಿಗೆ ತಿಳಿಸಿದ್ದಾರೆ.
ಕಂಪನಿಗಳ ಮುಖ್ಯಸ್ಥರೊಂದಿಗೆ ತನ್ನನ್ನು ಭೇಟಿ ಮಾಡಿಸುವಂತೆ ಮನೋಹರ ಜೋಶಿ ತನ್ನಲ್ಲಿ ಕೋರಿದ್ದರು ಎಂದು ಸ್ವತಃ ಅಂಶುಮಾನ್ ಮಿಶ್ರ ಆರೋಪ ಮಾಡಿದ್ದಾರೆ. ಬಿಜೆಪಿಗೆ ಹಣ ಸಂಗ್ರಹಿಸುವ ಹಿನ್ನೆಲೆಯಲ್ಲಿ 2ಜಿ ಹಗರಣದಿಂದ ಲಾಭ ಪಡೆದುಕೊಂಡಿರುವ ಕಂಪನಿಗಳ ಮುಖ್ಯಸ್ಥರ ಜತೆಗೆ ತಮ್ಮ ಭೇಟಿ ಏರ್ಪಡಿಸುವಂತೆ ಜೋಶಿ ಮತ್ತು ಅವರ ಸ್ನೇಹಿತೆಯೊಬ್ಬರು ತನ್ನನ್ನು ಕೋರಿದ್ದರು ಎಂಬುದು ಮಿಶ್ರಾ ಆರೋಪ ಎಂದು ಅವರು ಹೇಳಿದ್ದಾರೆ
ಆರೋಪ ನಿರಾಕರಿಸಿದ ಜೋಶಿ: ಈ ಆರೋಪಗಳನ್ನು ಜೋಶಿ ನಿರಾಕರಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಅವರು ಈ ರೀತಿ ಹೇಳುತ್ತಿದ್ದಾರೆ ಎಂದರು. ತನ್ನ ವಿರುದ್ಧದ ಆರೋಪಗಳ ಕುರಿತ ಯಾವುದೇ ತನಿಖೆಯನ್ನು ಸ್ವಾಗತಿಸುವುದಾಗಿ ಹೇಳಿದ ಜೋಶಿ, ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು. ಕುತೂಹಲಕಾರಿ ಸಂಗತಿಯೆಂದರೆ ಜಾರ್ಖಂಡ್‌ನಿಂದ ರಾಜ್ಯಸಭೆಗೆ ಆಯ್ಕೆ ಕೋರಿರುವ ಮಿಶ್ರಾಗೆ ಬೆಂಬಲ ನೀಡುವ ಗುಪ್ತ ನಿರ್ಧಾರವನ್ನು ಬಿಜೆಪಿ ಮೊದಲು ತೆಗೆದುಕೊಂಡಿತ್ತು.
ತನಗೆ ಬಿಜೆಪಿಯ ಉನ್ನತ ನಾಯಕತ್ವ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಮುಖ್ಯಮಂತ್ರಿಗಳೊಂದಿಗೆ ನೇರ ಸಂಪರ್ಕವಿದೆ ಎಂದು ಹೇಳಿಕೊಂಡ ಮಿಶ್ರಾ, ತಾನು ಮಾಡಿದ ಆರೋಪಗಳ ಬಗ್ಗೆ ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಎಂದಿದ್ದಾರೆ.












Click it and Unblock the Notifications