ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳ ಮಾರಾಮಾರಿ

ಜೈಲಿನೊಳಗೆ ನುಗ್ಗಿದ ಲಡ್ಡು ಗ್ಯಾಂಗ್ ಇಮ್ರಾನ್ ಸಹಚರ ಜೂಟರಕಲ್ ಎನ್ನುವವನ ಮೇಲೆ ಮೇಲೆ ದಾಳಿ ಮಾಡಿ ತೀವ್ರ ಹಲ್ಲೆ ನಡೆಸಿದ್ದಾರೆ. ಬ್ಲೇಡ್ ನಿಂದ ಆತನ ಮುಖ, ಎದೆಯ ಮೇಲೆ ಬರೆ ಎಳೆದು ತೀವ್ರವಾಗಿ ಗಾಯಗೊಳಿಸಿದ್ದಾರೆ. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಕೆಲ ದಿನಗಳ ಹಿಂದೆ ಈ ಎರಡೂ ಗ್ಯಾಂಗ್ ನಡುವೆ ಮಾರಾಮಾರಿ ನಡೆದಿತ್ತು, ಆಗಲೂ ಪೊಲೀಸರು ಅದನ್ನು ತಿಳಿಗೊಳಿಸಿದ್ದರು .
ಕೆಲ ತಿಂಗಳ ಹಿಂದೆ ಅಂದರೆ ಡಿಸೆಂಬರ್ ತಿಂಗಳಲ್ಲಿ ಕೊರಂಗು ಎನ್ನುವ ರೌಡಿ ಪೋಲೀಸ್ ವರಿಷ್ಠಾಧಿಕಾರಿ ಎಸ್ಪಿ ಕೃಷ್ಣಕುಮಾರ್ ಮತ್ತು ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದ.












Click it and Unblock the Notifications