ಒಂಬತ್ತು ಒಂಬತ್ತು ಒಂಬತ್ತು ತೋಳ ಹಳ್ಳಕ್ಕೆ ಬಿತ್ತು!

karnataka-bjp-battle-what-next-bs-yeddyurappa
ಬೆಂಗಳೂರು, ಮಾ.20: ಯಾವ ಪುಣ್ಯಾತ್ಮ ದಿಲ್ಲಿಯಲ್ಲಿ ಬಿಜೆಪಿ ಹೈಕಮಾಂಡಿಗೆ ಈ ಐಡಿಯಾ ಕೊಟ್ಟನೋ ಅಂತೂ ವರಿಷ್ಠರು ಜಾಣ್ಮೆಯ ಆದರೆ ಅಷ್ಟೇ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಸದಾನಂದಗೌಡರನ್ನು ಖುರ್ಚಿಯಿಂದ ಕೆಳಗುರುಳಿಸಬೇಕೆಂಬ ಮಾಜಿ ಸಿಎಂ ಯಡಿಯೂರಪ್ಪ ಅವರ ಮಾಸ್ಟರ್ ಪ್ಲಾನಿಗೆ ಹೈಕಮಾಂಡ್ ತೆಗದುಕೊಂಡಿರುವ ನಿರ್ಧಾರ ನೋಡಿದರೆ ಸದ್ಯಕ್ಕೆ ಯಡಿಯೂರಪ್ಪ ಗದ್ದುಗೆಗೇರುವುದು ಅನುಮಾನ ಅನುಮಾನ.

'ತಕ್ಷಣಕ್ಕೆ ಛುಪ್ ಹೋ ಯಡಿಯೂರಪ್ಪ ಜೀ' ಎಂದು ಗಡ್ಕರಿ ಪ್ರೀತಿಯಿಂದ ಗದರಿಕೊಂಡಿರುವುದನ್ನು ಕೇಳಿ ಯಡಿಯೂರಪ್ಪ ಪಟಾಲಂ ನಿಜಕ್ಕೂ ಆನಂದಭರಿತವಾಗಿದೆ. 'ಅತ್ತ constitutional crisis ಸೃಷ್ಟಿಯಾಗಬಾರದು ಎಂದು ಗಡ್ಕರಿ ಗದರಿಕೊಂಡಿದ್ದಾರೆ ಅಷ್ಟೇ' ಎಂದು ಸಮಾಧಾನ ಪಟ್ಟುಕೊಂಡಿದೆ. ಆದರೆ ವರಿಷ್ಠರ ರಾಜಕೀಯ ಸಮೀಕರಣವೇ ಬೇರೆಯಾಗಿದೆ.

ಆಯ್ತು ಬಜೆಟ್ ಮಂಡಿಸಿಕೊಳ್ಳಲಿ. ಆದರೆ ಅದಾಗುತ್ತಿದ್ದಂತೆ ಸಿಎಂ ಕುರ್ಚಿಯಿಂದ ಅವಯ್ಯನನ್ನು ಇಳಿಸಿ ಎನ್ನುತ್ತಿರುವ ಯಡಿಯೂರಪ್ಪಗೆ ಇಂದು (ಮಾರ್ಚ್ 20) ಮತ್ತು ನಾಳೆ (ಮಾರ್ಚ್ 21) ಮಹತ್ವದ ದಿನಗಳಾಗಿವೆ. ಗಣಿ ಅಕ್ರಮದ ಬಗ್ಗೆ ಸಿಇಸಿ ಮುಂದೆ ಯಡಿಯೂರಪ್ಪ ಪರ ಅಡ್ವೊಕೇಟ್ ಅಶೋಕ್ ಹಾರ್ನಳ್ಳಿ ವಕಾಲತ್ತು ವಹಿಸಲಿದ್ದಾರೆ. ಅಲ್ಲೇನಾದರೂ ಎಡವಟ್ಟಾದರೆ... ಹೈಕಮಾಂಡ್ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ.

ನಾಳೆ ಸದಾನಂದಗೆ ಡಬ್ಕುಡಬಲ್?: ಇನ್ನು, ನಾಳೆ ಉಡುಪಿ ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯಲ್ಲಿ ಸದಾನಂದಗೌಡರ candidate ಗೆದ್ದು ಬಿಟ್ಟರೆ ಅದು ಖುದ್ದು ಸದಾನಂದಗೌಡರ ಗೆಲುವಾಗಲಿದೆ. ಈ ಲೆಕ್ಕಾಚಾರದಲ್ಲೇ ಅಂದು ಯಡಿಯೂರಪ್ಪನವರ ಹಿತಶತ್ರು ಅನಂತ್ ಹೀಗೆ ಹೇಳಿದ್ದು - ಸದಾನಂದಗೌಡರ ನಾಯಕತ್ವದಲ್ಲೇ ಉಡುಪಿ ಚಿಕ್ಕಮಗಳೂರು ಉಪಚುನಾವಣೆ ಎದುರಿಸುತ್ತಿದ್ದೇವೆ ಎಂದು ಪಲುಕಿದ್ದು.

ಅತ್ತ, 'ದೂರದೃಷ್ಟಿ'ಯ ಅನಂತು ಹಾಗೆ ಹೇಳುತ್ತಿದ್ದಂತೆ ಇತ್ತ ಸದಾನಂದರೂ 'ಕಳಂಕ ಹೊತ್ತ' ಯಡಿಯೂರಪ್ಪಜೀಗೆ ಛೀ ಹಚ್ಚಾ ಅಂದಿದ್ದು. ಅಲ್ಲಿಗೆ ನಾಳೆಯ ಚುನಾವಣೆ ಫಲಿತಾಂಶ ಬಿಜೆಪಿ ಪರವಾದರೆ ಸದಾನಂದಗೆ ಡಬ್ಕುಡಬಲ್. ಇತ್ತ ಮಹತ್ವಾಕಾಂಕ್ಷಿ ಬಜೆಟ್ ಮಂಡನೆ ಸಾಂಗೋಪಾಂಗವಾಗಿ ನೆರವೇರಲಿದೆ. ಅತ್ತ, ಸುನಿಲ್ ಕುಮಾರ್ ರೂಪದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಂಗೂ ಆಗುತ್ತದೆ.

ಅದೇ ಧೈರ್ಯದಲ್ಲಿ ವರಿಷ್ಠರ ಮೂಲಕ ಸುಪಾರಿ ನೀಡಿ 'ಯಡಿಯೂರಪ್ಪಗೆ ತೂ ದಾಂಡ್ ತು ಬದ್ ಮೈ ರೆಡಿ' ಎಂದು ಸದಾನಂದರು ಛಂಗನೆ ಹಾರುತ್ತಾರೆ. ಇನ್ನು, ಅಖಂಡ ಮೌನಮುನಿ ಅಡ್ವಾನಿಯೂ ಬೆಂಕಿಯುಗಳಿದರೆ ಯಡಿಯೂರಪ್ಪ ಹಳ್ಳಕ್ಕೆ ಬಿದ್ದಂತೆ...

ಆದರೆ ಲಕ್ಕು ಯಡಿಯೂರಪ್ಪ ಅವರತ್ತ ಗುದ್ದಿಕೊಂಡು ಬಂದರೆ ಗುಲ್ಬರ್ಗಾದ ಮಾಣಿಕೇಶ್ವರಿ ದೇವಿಗೂ ಸದಾನಂದರನ್ನು ಕಾಪಾಡೊಕ್ಕೆ ಅಗೊಲ್ಲ. 'ಈಗಾಗ್ಲೇ ಬಜೆಟ್ ಮಂಡನೆಗೆ ಅವಕಾಶ ನೀಡಿದ್ದೇ ಜಾಸ್ತಿಯಾಯ್ತು. ನಡೀತಿರು ಇನ್ನು' ಎಂದು ಯಡಿಯೂರಪ್ಪ ಘರ್ಜಿಸುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗುತ್ತಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+