ಮಲ್ಯಗೆ ಕೈಕೊಟ್ಟ ಟೆನ್ನಿಸ್ ತಾರೆ ವಿಜಯ್

ಬಿಎಸ್ ಇ ಗೆ ಈ ಬಗ್ಗೆ ಮಾಹಿತಿ ನೀಡಿರುವ ಕಿಂಗ್ ಫಿಷರ್ ಸಂಸ್ಥೆ, ವಿಜಯ್ ಅವರು ತಮ್ಮ ಖಾಸಗಿ ಜೀವನದ ಒತ್ತಡದ ನಡುವೆ ಸಂಸ್ಥೆಯ ಸಭೆಗಳಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಹಾಗಾಗಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದೆ. ವಿಜಯ್ ರಾಜೀನಾಮೆಯಿಂದ ಬೇಸರವಾಗಿದೆ ಎಂದಷ್ಟೇ ಮಲ್ಯ ಹೇಳಿದ್ದಾರೆ.
ವಿಜಯ್ ಹೊರ ನಡೆದ ನಂತರ ಬೋರ್ಡ್ ನಲ್ಲಿ ಚೇರ್ ಮನ್ ವಿಜಯ್ ಮಲ್ಯ, ಉಪ ಚೇರ್ಮನ್ ಸುಭಾಷ್ ಗುಪ್ತೆ, ಸಿಎಫ್ ಒ ಎಕೆ ರವಿ ನೆಡುಂಗಡಿ ಹಾಗೀ ಐಸಿಎಐ ಸದಸ್ಯ ಅನಿಲ್ ಕುಮಾರ್ ಗಂಗೂಲಿ ಮಾತ್ರ ಉಳಿದಿದ್ದಾರೆ. ಈ ಮುಂಚೆ ದಿವಾನ್ ಅರುಣ್ ನಂದಾ ಅವರು ಕೂಡಾ ಬೋರ್ಡ್ ಗೆ ರಾಜೀನಾಮೆ ನೀಡಿ ಹೊರ ನಡೆದಿದ್ದರು.
ಕಿಂಗ್ ಫಿಷರ್ ನಲ್ಲಿ ಸ್ವತಂತ್ರ ಸದಸ್ಯರಾಗಿದ್ದ ವಿಜಯ್ ಅಮೃತ್ ರಾಜ್ ಅವರು ತಮ್ಮ ಹೆಸರಿನ ಫೌಂಡೇಷನ್ ಕಾರ್ಯಕ್ರಮದಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದ್ದಾರೆ. ವಿಶ್ವಸಂಸ್ಥೆಯ ಶಾಂತಿ ರಾಯಭಾರಿ ಕೂಡಾ ಆಗಿರುವ ವಿಜಯ್, 1987ರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಪ್ರಶಸ್ತಿ ಕೂಡಾ ಗಳಿಸಿದ್ದಾರೆ.
ಡೇವಿಸ್ ಕಪ್ ಆಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎನಿಸಿಕೊಂಡಿದ್ದ ವಿಜಯ್, ಟೆನ್ನಿಸ್ ಕ್ಷೇತ್ರದಲ್ಲಿ ಸದ್ಯಕ್ಕೆ ವೀಕ್ಷಕ ವಿವರಣೆಗಾರರಾಗಿ ಮುಂದುವರೆದಿದ್ದಾರೆ. ವಿಜಯ್ ಹಾಗೂ ಮಲ್ಯ ನಡುವೆ ಏನಾದರೂ ಬಿಕ್ಕಟ್ಟು ಉಂಟಾಗಿತ್ತಾ? ವಿಜಯ್ ರಾಜೀನಾಮೆಗೆ ಸ್ಪಷ್ಟ ಕಾರಣ ಏನು? ಎಂಬುದು ಇನ್ನೂ ತಿಳಿದಿಲ್ಲ.












Click it and Unblock the Notifications