ಬೀದಿಯಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ನಗ್ನ ರಾದ್ಧಾಂತ
ಬಿಜಾಪುರ,
ಮಾ 10: ಪಾನಮತ್ತ ಮೋಟರ್ ವಾಹನ ಇನ್ಸ್‌ಪೆಕ್ಟರೊಬ್ಬರು ಬೀದಿಯಲ್ಲಿ ನಗ್ನವಾಗಿ ನರ್ತಿಸಿ ರಾದ್ಧಾಂತ ಮಾಡಿದ ಘಟನೆ ವಿಜಾಪುರ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ಶುಕ್ರವಾರ ನಡೆದಿದೆ. id="toptextpromo">ಮೂಲತಃ
ಬೆಂಗಳೂರಿನ ಈ ಹಿರಿಯ ಅಧಿಕಾರಿ ಹೋಳಿ ಹಬ್ಬದ ಪ್ರಯುಕ್ತ ಕಂಠಪೂರ್ತಿ ಕುಡಿದು ಅಂಗಿಬಿಚ್ಚಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ಬಂದಾಗ ಆತ ಸಂಪೂರ್ಣವಾಗಿ ನಗ್ನನಾಗಿ ನರ್ತಿಸುತ್ತಿದ್ದ. id='are-slot-1' class='oiad oi-axt oiadv'> id='top-searched-articles'>ಗಾಂಧಿಚೌಕ್
ಪೊಲೀಸ್ ಠಾಣೆಯಲ್ಲೂ ಈತ ಕೂಗಾಟ ಮಾಡಿ ರಾದ್ಧಾಂತ ಮಾಡಿದ್ದ. ಕಳೆದೆರಡು ದಿನಗಳಿಂದ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದು, ಮಾನಸಿಕವಾಗಿ ಅಸ್ವಸ್ಥ ಎಂದು ಮನೆಯವರು ತಿಳಿಸಿದ ಹಿನ್ನಲೆಯಲ್ಲಿ ಯಾವುದೇ ಕೇಸ್ ದಾಖಲಿಸದೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications