ಹಲ್ಲೆಕೋರ ಲಾಯರಿಗೆ ಶಿಕ್ಷೆ ಯಾವಾಗ ಮಿರ್ಜಿ?

reddy-cbi-custody-media-men-beaten-up-mirji
ಬೆಂಗಳೂರು, ಮಾ.2: ಅಕ್ರಮ ಗಣಿವೀರ ಜನಾರ್ದನ ರೆಡ್ಡಿ ಬೆಂಗಳೂರಿಗೆ ಕಾಲಿಟ್ಟಿದ್ದು ರಾಜಧಾನಿ ಪತ್ರಕರ್ತರಿಗೆ ಮಾರಕವಾಗಿ ಪರಿಣಮಿಸಿದೆ. ರೆಡ್ಡಿಯನ್ನು ಸಿಬಿಐ ವಿಶೇಷ ಕೋರ್ಟಿನಲ್ಲಿ ಹಾಜರುಪಡಿಸುವುದಕ್ಕಾಗಿ ಪೊಲೀಸರು ಕರೆದೊಯ್ಯುತ್ತಿದ್ದರು. ಬೆಂಗಾವಲು ವಾಹನಗಳೊಂದಿಗೆ ಸಿಟಿ ಸಿವಿಲ್ ಕೋರ್ಟ್ ಆವರಣ ಪ್ರವೇಶಿಸಿದ ಸಂದರ್ಭದಲ್ಲಿ ಟಿವಿ ಕ್ಯಾಮರಾಮನ್ ಗಳು ರೆಡ್ಡಿ ಇದ್ದ ವಾಹನಕ್ಕೆ ಮುಗಿಬಿದ್ದರು.

ಆಗ ಸ್ಥಳದಲ್ಲಿ ಗರುಡಗಂಬದಂತೆ ನಿಂತಿದ್ದ ವಕೀಲ ಮಹಾಶಯನೊಬ್ಬ ಏಕಾಏಕಿ, ಅಪ್ರಚೋದಿತವಾಗಿ ಪಬ್ಲಿಕ್ ಟಿವಿಯ ಕ್ಯಾಮರಾಮನ್ ನಾಗೇಶ್ ಅವರ ತಲೆಗೂದಲನ್ನು ಹಿಡಿದು, ಎಳೆದಾಡುತ್ತಾ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದು ಸುವರ್ಣ ನ್ಯೂಸ್ ಟಿವಿಯಲ್ಲಿ ಕಣ್ಣಿಗೆ ಕಟ್ಟುವಂತೆ ದಾಖಲಾಗಿದೆ. ಖುದ್ದು ನಿಮ್ಮ ಕೈಗೆಳಗಿನ ಡಿಸಿಪಿ ರಮೇಶ್ ಅವರನ್ನೂ ಈ ಗೂಂಡಾ ವಕೀಲರು ಬಿಟ್ಟಿಲ್ಲ. ಅವರನ್ನೂ ಹೊಡೆದು, ಆಸ್ಪತ್ರೆಗೆ ಅಟ್ಟಿದ್ದಾರೆ.

law and order ಎಲ್ಲಿದೆ ಮಿರ್ಜಿ?: ಈಗ ಪ್ರಶ್ನೆ ಏನೆಂದರೆ ಸನ್ಮಾನ್ಯ ಕಾನೂನು ಸಚಿವ ಸುರೇಶ್ ಕುಮಾರ್ ಮತ್ತು ಸಡಿಲವಾಗಿ ಮಾತನಾಡುವ ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಸಾಹೇಬರು ಏನು ಮಾಡುತ್ತಾರೆ? ಇದೇ ಜ್ಯೋತಿ ಸಾಹೇಬರು ಹೆಂಗಸರಂತೆ ರೆಡ್ಡಿ ಭದ್ರತೆ ಬಗ್ಗೆ ಕೇಳಿದಾಗ ಕ್ಯಾಮೆರಾಗೆ ಮುಖ ಕೊಟ್ಟು 'ನಾವೂ ಒಳ್ಳೆಯವರು ನೀವೂ ಒಳ್ಳೆಯವರು ಏನೂ ಆಗೋಲ್ಲ' ಅಂತ ಪೆದ್ದು ಪೆದ್ದಾಗಿ ಇಂದು ಬೆಳಗ್ಗೆತಾನೇ ಪ್ರತಿಕ್ರಿಯಿಸಿದ್ದರು.

ಸ್ವಾಮಿ ಜ್ಯೋತಿ ಸಾಹೇಬರೇ ಸ್ವಲ್ಪ ಖಡಕ್ಕಾಗಿ ಮಾತನಾಡಿ. ಇಡೀ ವಕೀಲ ಕುಲಕ್ಕೆ ಕೆಟ್ಟ ಹೆಸರು ತರುವಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದೆ. ಮಾಧ್ಯಮದವರು ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಇಂದು ಬೆಳಗ್ಗೆ ನಡೆದಿರುವ ಘಟನೆಯಂತೂ ತೀರಾ ಅಪ್ರಚೋದಿತವಾಗಿದೆ. ಹಲ್ಲೆ ಮಾಡಿದವ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ. ಇನ್ನು ನೀವು ಯಾವಾಗ ಅವನನ್ನು ಸೆರೆ ಹಿಡಿದು ಶಿಕ್ಷಿಸುವುದು. ಪುಂಡಪೋಕರಿ ಲಾಯರಿಗಳಿಗೆ ತಕ್ಕ ಪಾಠ ಕಲಿಸುವುದಕ್ಕೆ ಉತ್ತಮ ಅವಕಾಶ ಒದಗಿಬಂದಿದೆ. Take action, Mr Mirji.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+