ಕೋರ್ಟಿಗೆ ಗಾಲಿ ರೆಡ್ಡಿ ಆಪ್ತ ಅಲಿ ಆಚ್ಚರಿ ಎಂಟ್ರಿ

Reddy Aide Ali Khan Surrenders
ಬೆಂಗಳೂರು, ಮಾ.2: ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಓಬಳಾಪುರಂ ಗಣಿ ಕಂಪನಿ ಮಾಲೀಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಆಪ್ತ ಸಹಾಯಕ ಅಲಿಖಾನ್‌ ದಿಢೀರ್ ಎಂದು ಬೆಂಗಳೂರಿನ ಸಿವಿಲ್ ಕೋರ್ಟ್ ಆವರಣದಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣ ನಡೆದಿದ್ದು, ಗಾಲಿ ರೆಡ್ಡಿ ಅವರನ್ನು ಹಾಜರು ಪಡಿಸಲಾಗಿದೆ. ಆದರೆ, ಇಷ್ಟು ದಿನ ನಾಪತ್ತೆಯಾಗಿದ್ದ ಅಲಿ, ಇದ್ದಕ್ಕಿದ್ದಂತೆ ನ್ಯಾಯಾಲಯಕ್ಕೆ ಶರಣಾಗಿದ್ದು ಏಕೆ? ಎಂಬುದು ಕುತೂಹಲ ಮೂಡಿಸಿದೆ.

ಆತ ನಿರಪರಾಧಿಯಾಗಿದ್ದರೆ ಸಿಬಿಐಗೆ ಶರಣಾಗತನಾಗಿ ಗೊತ್ತಿರುವ ಮಾಹಿತಿಯನ್ನು ಹೇಳಲು ಭಯ ಏಕೆ? ಎಂದು ಸಿಬಿಐ ತಂಡ ಈ ಹಿಂದೆ ಅಲಿಖಾನ್ ಅವರ ಕುಟುಂಬವನ್ನು ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಲಿ ಖಾನ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಿ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಪ್ರತಿ ತಲುಪಿಸಲಾಗಿತ್ತು. ಅಲಿಖಾನ್ ಎಲ್ಲಿದ್ದ? ಏನು ಮಾಡುತ್ತಿದ್ದ? ರೆಡ್ಡಿ ಕೋರ್ಟ್ ಗೆ ಎಂಟ್ರಿ ಆಗುತ್ತಿದ್ದಂತೆ ಬೆಂಗಳೂರಿಗೆ ಬಂದು ಶರಣಾಗಿದ್ದು ಏಕೆ?. ಅಥವಾ ರೆಡ್ಡಿಯನ್ನು ನೋಡಲು ಬಂದವನು ವಿಧಿ ಇಲ್ಲದೆ ಶರಣಾದನೇ? ಎಂಬ ಪ್ರಶ್ನೆ ಕಾಡುತ್ತಿದೆ. ಓದಿ: ಅಸಲಿಗೆ ಯಾರು ಈ ಅಲಿಖಾನ್?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+