ಗಾಲಿ ರೆಡ್ಡಿ ಕರ್ಕೊಂಡು ಬಳ್ಳಾರಿಗೆ ಸಿಬಿಐ ತಂಡ?

CBI
ಬೆಂಗಳೂರು, ಮಾ.2: ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಮಾ.12ರ ತನಕ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಅಗತ್ಯವಿರುವುದರಿಂದ ಆರೋಪಿಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಬೆಂಗಳೂರು ಸಿಬಿಐ ಮಾಡಿದ ಮನವಿಯನ್ನು ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ.

ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಕೂಡಾ ಸಿಬಿಐ ವಶದಲ್ಲಿದ್ದು, ಉಳಿದ 20+ ಆರೋಪಿಗಳನ್ನು ಕೂಡಾ ಬಂಧಿಸಿ ವಿಚಾರಣೆ ನಡೆಸಲು ಅನುಮತಿ ನೀಡಲಾಗಿದೆ. ಸಿಬಿಐ ತಂಡ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸೋಮವಾರ ಬಳಿಕ ಬಳ್ಳಾರಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.

ಆದರೆ, ಸುರಕ್ಷತಾ ದೃಷ್ಟಿಯಿಂದ ಇದು ಸಾಧ್ಯವಾಗದಿದ್ದರೆ, ಬೆಂಗಳೂರಿನಲ್ಲೇ ಗುಪ್ತ ಸ್ಥಳವೊಂದರಲ್ಲಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. ರೆಡ್ಡಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸಿಬಿಐ ಅರ್ಧ ಗೆಲುವು ಪಡೆದಿದೆ.

ಆದರೆ, ಹೈದರಾಬಾದಿನ ಸಿಬಿಐ ತಂಡ ಮುಂದೆ ಮೌನವ್ರತ ಆಚರಿಸಿದ ರೆಡ್ಡಿ ಇಲ್ಲೂ ಕೂಡಾ ಅದೇ ವ್ರತವನ್ನು ಮುಂದುವರೆಸುವ ಸಾಧ್ಯತೆಗಳಿದೆ. ಆದರೆ, ರೆಡ್ಡಿಯ ಸಕಲ ಅಕ್ರಮಗಳ ವಿವರ ತಿಳಿದಿರುವ ಅಲಿ ಬಾಯ್ಬಿಟ್ಟರೆ ರೆಡ್ಡಿ ಸಂಕಷ್ಟಗಳು ಅಂತ್ಯಕಾಣದ ಕಥೆಯಾಗಿ ಬೆಳೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+