ಮಾಧ್ಯಮದ ಮೇಲೆ ಮುಗಿಬಿದ್ದ ಸಿಎಂ ಸದಾನಂದಗೌಡ

ಪೊಲೀಸರ ದುಂಡಾವರ್ತನೆಯನ್ನು ರಾಜ್ಯ ಪೊಲೀಸ್ ಮಾಹನಿರ್ದೇಶಕ ಶಂಕರ್ ಬಿದರಿ ಖಂಡಿಸಿದ್ದಾರೆ.
ಖುದ್ದು ಡಿಸಿಪಿ ರಮೇಶ್ ಮೇಲೆ ಹಲ್ಲೆ ನಡೆದಿದ್ದರೂ, ಯಾವುದೇ ಪ್ರಚೋದನೆಯಿಲ್ಲದೆಯೇ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಯಾವ ಕಲ್ರಮ ಕೈಗೊಳ್ಳುತ್ತೀರಿ ಸ್ವಾಮಿ ಎಂದು ಮುಖ್ಯಮಂತ್ರಿಗಳನ್ನು ಕೇಳದ್ದೇ ತಡ. ಹೆಸರಿಗೆ ತಕ್ಕಂತೆ ಸದಾನಂದರಾಗಿರುವ ಗೌಡರು ಸಿಡುಕುಮುಖದೊಂದಿಗೆ ವರದಿಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಧ್ಯಮಗಳ ಬಗ್ಗೆ ತನಗೆ ಅಪಾರ ಗೌರವವಿದೆ ಎಂದು ಹೇಳುತ್ತಲೇ 'ಮಾಧ್ಯಮದವರಿಗೆ ತಕ್ಕ ಶಿಕ್ಷೆಯಾಗಿದೆ' ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ.
ಮಾಧ್ಯಮಗಳಲ್ಲಿ ಎಲ್ಲರೂ ಸಾಚಾಗಳು ಅಂಥ ಹೇಳಲಾಗದು. ನಿಮ್ಮಲೂ ವಕೀಲರ ಥರದವರು ಇದ್ದಾರೆ ಎಂದು ಗಂಟುಮುಖವಿಟ್ಟುಕೊಂಡು ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ. ಈ ನನ್ನ ಹೇಳಿಕೆಯೇ ಸ್ವಲ್ಪ ಹೊತ್ತಿನಲ್ಲಿ ಟಿವಿಗಳಲ್ಲಿ ವಿಭಿನ್ನ ಅರ್ಥಗಳಲ್ಲಿ ಬರುತ್ತದೆ ಎಂದಿದ್ದಾರೆ.
ಖುದ್ದು ಮುಖ್ಯಮಂತ್ರಿಯೇ ಹೀಗೆ ಹೇಳಿರುವಾಗ ಕಂಗೆಟ್ಟಿರುವ ಮಾಧ್ಯಮದವರಿಗೆ ರಾಜ್ಯ ನ್ಯಾಯಾಂಗದ ಪ್ರಥಮ ಪ್ರಜೆ ಅರ್ಥಾತ್ ಚೀಫ್ ಜಸ್ಟೀಸ್ ವಿಕ್ರಮ್ ಜಿತ್ ಸೇನ್ ಪತ್ರಕರ್ತರ ನೆರವಿಗೆ ಧಾವಿಸಿದ್ದಾರೆ.
ತಿಂಗಳ ಹಿಂದೆ ತೀವ್ರ ಪುಂಡಾಟಿಕೆ ನಡೆಸಿದ್ದ ವಕೀಲರ ಬಗ್ಗೆ ಕಿಡಿಕಿಡಿಯಾಗಿದ್ದ ಸೇನ್, ಈ ಬಾರಿ ಅದು ಪುನರಾವರ್ತನೆಯಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕೋರ್ಟಿನಿಂದ ಕೆಳಗಿಳಿದುಬಂದ ನ್ಯಾ. ಸೇನ್ ಅವರು ಸ್ಥಳ ಪರೀಕ್ಷೆಗಾಗಿ ರಣಾಂಗಣವಾಗಿರುವ ಸಿಟಿ ಸಿವಿಲ್ ಕೋರ್ಟ್ ಆವರಣಕ್ಕೆ ಧಾವಿಸಿದ್ದಾರೆ.











Click it and Unblock the Notifications