ಆರ್ ಟಿ ನಗರ, ಸಿವಿಲ್ ಕೋರ್ಟ್ ಬಳಿ ನಿಷೇಧಾಜ್ಞೆ

ಜೊತೆಗೆ ಕೋರ್ಟ್ ಆವರಣದಿಂದ ಆರೋಪಿ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈಗ ಆರ್ ಟಿ ನಗರದ ಗಂಗೇನಹಳ್ಳಿಯಲ್ಲಿರುವ ಸಿಬಿಐ ಕಚೇರಿಯಲ್ಲಿ ಇಬ್ಬರು ಆರೋಪಿಗಳನ್ನ ಇಡಲಾಗಿದೆ. ಹೀಗಾಗಿ ಆರ್ ಟಿ ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಆರ್ ಅಶೋಕ್ ಹೇಳಿಕೆ: ಹಿಂದೆ ಪೊಲೀಸರಿಗೆ ಹೊಡೆದಿದ್ದರು. ಈಗ ಮಾಧ್ಯಮದ ಮೇಲೆ ಹಲ್ಲೆ ಮಾಡಿದ್ದಾರೆ. ಗೂಂಡಾಗಿರಿ ಮಾಡಿದ ಎಲ್ಲಾ ವಕೀಲರ ಮೇಲೆ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಕೋರ್ಟ್ ಆವರಣದ ಸುತ್ತಮತ್ತಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಾಹಿತಿ ಸಂಗ್ರಹಿಸಲು ಸ್ವತಃ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅವರು ಸ್ಥಳಕ್ಕ ಧಾವಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.











Click it and Unblock the Notifications