ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಸಾಲ: ICICI Bank ಗೋಲ್ ಮಾಲ್

By Srinath
|
Google Oneindia Kannada News

icici-bank-chitradurga-gold-loan-fraud
ಚಿತ್ರದುರ್ಗ, ಮಾ.1: ಸ್ಥಳೀಯ ICICI Bank ಶಾಖೆಯ 6 ಅಧಿಕಾರಿಗಳು ಸುಮಾರು 1.5 ಕೋಟಿ ರು. ಗೋಲ್ ಮಾಲ್ ಮಾಡಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಇಬ್ಬರು ನಾಪತ್ತೆಯಾಗಿದ್ದಾರೆ. ಚಿನ್ನದ ಮೇಲೆ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಈ ಅಧಿಕಾರಿಗಳು ಈ ಭಾನಗಡಿ ಮಾಡಿದ್ದಾರೆ.

ಬ್ರ್ಯಾಂಚ್ ಮ್ಯಾನೇಜರ್ ಪ್ರವೀಣ್ ಠಿಕಾರಿ, ಶಾಖೆಯ ಎಕ್ಸಿಕ್ಯೂಟೀವ್ ಮ್ಯಾನೇಜರ್ ಶ್ರೀರಂಗ ಮಜುಂದಾರ್ ಹಾಗೂ ಇನ್ನೊಬ್ಬ ನೌಕರ ಪ್ರದೀಪ್ ಮತ್ತು ಅರಿಫ್‌ವುಲ್ಲಾ ಅವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಬ್ಯಾಂಕ್ ಅಧಿಕಾರಿ ನವೀನ್, ಸೇಲ್ಸ್ ಏಜೆಂಟ್ ರಮೇಶ್ ನಾಪತ್ತೆಯಾಗಿದ್ದಾರೆ. ರಮೇಶ್ ಮತ್ತು ಅರಿಫ್‌ವುಲ್ಲಾ ಅವರನ್ನು ಹೊರಗುತ್ತಿಗೆ ನೌಕರರು. ರಮೇಶ್ ಅರಿಫ್‌ವುಲ್ಲಾಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.

ಈ ಸಂಬಂಧ, ಹುಬ್ಬಳ್ಳಿ ಕ್ಲಸ್ಟರ್ ಬ್ಯಾಂಕ್‌ನ ವ್ಯವಸ್ಥಾಪಕ ನಿರೇಶ್ ಲಲನ್ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ವಂಚನೆ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಐಸಿಐಸಿಐ ಬ್ಯಾಂಕಿನಲ್ಲಿ ಆರು ತಿಂಗಳಿಗೆ ಒಮ್ಮೆ ಲೆಕ್ಕಪತ್ರ ಪರಿಶೋಧನೆ ನಡೆಸುವುದು ಪದ್ಧತಿ. ಅದೇ ರೀತಿ ಈ ಬಾರಿ ಲೆಕ್ಕಪತ್ರ ಪರಿಶೋಧನೆ ನಡೆಸಿದಾಗ ಇದು ಬೆಳಕಿಗೆ ಬಂತು.

English summary
A gold loan fraud has been detected local branch of ICICI Bank in Chitradurga. The top level officials if the branch are involved tn the fraud. 4 of them has been arrested and removed from the job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X