ರಾಜ್ಯಪಾಲ ರೋಸಯ್ಯ 'ಡಿನೋಟಿಫಿಕೇಶನ್' ಸಾಧ್ಯತೆ

ಅಮೀರಪೇಟೆಯ ಮೈತ್ರಿವನಂನಲ್ಲಿ ನೂರಾರು ಕೋಟ್ಯಂತರ ರು ಮೌಲ್ಯದ 9.14 ಎಕರೆ ಜಾಗದ ಡಿನೋಟಿಫಿಕೇಶನ್ ಹಗರಣದಲ್ಲಿ ಕೆ. ರೋಸಯ್ಯ ಆಪಾದಿತರಾಗಿದ್ದಾರೆ. ಈ ಸಂಬಂಧ ಇಬ್ಬರು ಐಎಎಸ್ ಅಧಿಕಾರಿಗಳು ಸಲ್ಲಿಸಿರುವ ದಾಖಲೆ ಪತ್ರಗಳು ಮತ್ತಿತರ ದಾಖಲೆಗಳನ್ನು ಸಂಘವು ರಾಷ್ಟ್ರಪತಿಗೆ ಸಲ್ಲಿಸಿದೆ.
ಈ ಮಧ್ಯೆ, 2 ಜಿ ಹಗರಣದಲ್ಲಿ ಸುಪ್ರೀಂಕೋರ್ಟ್ ಹೇಳಿರುವಂತೆ ಸಾರ್ವಜನಿಕ ಆಸ್ತಿಪಾಸ್ತಿ ಕಬಳಿಸುವ ಅಧಿಕಾರಸ್ಥ ಮಂದಿಯನ್ನು ವಿಚಾರಣೆಗೊಳಪಡಿಸಲು ರಾಷ್ಟ್ರಪತಿಗಳ ಅನುಮತಿ ಅಗತ್ಯವಿಲ್ಲ ಎಂಬ ವಿಚಾರವನ್ನು ಸಂಘದ ಪರ ವಕೀಲ ಟಿ. ಶ್ರೀರಂಗರಾವ್ ಎಸಿಬಿ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ವಿಚಾರಣೆಯನ್ನು ಕೋರ್ಟ್ ಮಾರ್ಚ್ 2ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಐಎಎಸ್ ಅಧಿಕಾರಿಗಳಾದ ಬಿಪಿ ಆಚಾರ್ಯ ಮತ್ತು ಟಿ. ಸನ್ಯಾಸಿ ಅಪ್ಪಾರಾವ್ ಅವರು ನ್ಯಾಯಾಲಯದಲ್ಲಿ ಹಾಜರಾಗಿ, ನಿವೇಶನವನ್ನು ಡಿನೋಟಿಫೈ ಮಾಡಬಾರದು ಎಂದು ಅಂದಿನ ಮುಖ್ಯಮಂತ್ರಿ ರೋಸಯ್ಯ ಅವರಿಗೆ ಸ್ಪಷ್ಟವಾಗಿ ಸಲಹೆ ನೀಡಿದ್ದೆವು ಎಂದು ದಾಖಲೆಗಳ ಸಮೇತ ಕೋರ್ಟಿನಲ್ಲಿ ಹೇಳಿದ್ದರು.












Click it and Unblock the Notifications