ಯಡಿಯೂರಪ್ಪ ಬರ್ತ್ ಡೆ ಫ್ಲಾಪ್ ಷೊ: ಶ್ರೀರಾಮುಲು
ಬೆಂಗಳೂರು,
ಫೆ.28: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿನ್ನೆ ಆಚರಿಸಿಕೊಂಡ 70 ನೇ ಹುಟ್ಟು ಹಬ್ಬ utter flop show ಎಂದು ಬಳ್ಳಾರಿ ಸ್ವತಂತ್ರ ಶಾಸಕ ಬಿ. ಶ್ರೀರಾಮುಲು ವ್ಯಾಖ್ಯಾನಿಸಿದ್ದಾರೆ. id="toptextpromo">ಯಡಿಯೂರಪ್ಪಗೆ
ಬೆಂಬಲಿಗ ಶಾಸಕರ ಸಂಖ್ಯೆ ಕಡಿಮೆಯಾಗುತ್ತಿದೆ. ಜನ ಬೆಂಬಲವೂ ಇಲ್ಲವಾಗುತ್ತಿದೆ. ಅವರಿಂದ ಲಿಂಗಾಯಿತರಿಗೆ ಅನ್ಯಾಯವಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು ನಾವು ಪ್ರಯತ್ನಸಿದ್ದೆವು. ಆದರೆ ಯಡಿಯೂರಪ್ಪ ಅದಕ್ಕೆ ಅಡ್ಡಗಾಲು ಹಾಕಿದರು ಎಂದು ರಾಮುಲು ಗಂಭೀರ ಆರೋಪ ಮಾಡಿದರು. id='are-slot-1' class='oiad oi-axt oiadv'> id='top-searched-articles'>ಹೈದರಾಬಾದ್-ಕರ್ನಾಟಕ
ಪ್ರದೇಶದ ಅಭಿವೃದ್ಧಿ ಪಡಿಸುವಲ್ಲಿ ಸರಕಾರಗಳು ವಿಫಲವಾಗಿವೆ. ಹೈದರಾಬಾದ್-ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಮಾರ್ಚ್ 13, 14 ರಂದು ಗದಗದಲ್ಲಿ ಉಪವಾಸ ತಾವು ಉಪವಾಸ ಕೈಗೊಳ್ಳುವುದಾಗಿ ರಾಮುಲು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.











Click it and Unblock the Notifications