ಸಿಎಂ ಪಟ್ಟ ಈಗಲೇ ಬಿಡಲು ಸಿದ್ಧ: ಡಿವಿ ಸದಾನಂದ

ತಮ್ಮ ಆಪ್ತರ ಬಳಿ ಇತ್ತೀಚಿನ ಇತ್ತೀಚಿನ ರಾಜಕೀಯ ಘಟನಾವಳಿಗಳ ಬಗ್ಗೆ ಚರ್ಚಿಸುತ್ತಾ ಸದಾನಂದ ಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷದ ಹಿತದೃಷ್ಟಿಯಿಂದ ಸಂಸತ್ ಸ್ಥಾನವನ್ನು ತೊರೆದು ನಾನು ರಾಜ್ಯಕ್ಕೆ ಬಂದೆ. ಆದರೆ, ನಮ್ಮವರೇ ನಮ್ಮ ಕಾಲು ಹಿಡಿದು ಎಳೆಯಲು ಆರಂಭಿಸಿದ್ದು ತೀವ್ರವಾಗಿ ನೋವು ತಂದಿದೆ.
ನಾನು ಅಧಿಕಾರ ಬಯಸುವುದಿಲ್ಲ. ಇದ್ದಷ್ಟು ಕಾಲ ಜನರಿಗೆ ಒಳ್ಳೆಯದನ್ನು ಮಾಡಿದ್ದೇನೆ. ಸಿಎಂ ಪಟ್ಟ ಉಳಿಸಿಕೊಳ್ಳಲು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡುವುದಿಲ್ಲ.
ಗಡ್ಕರಿ ಅವರು ಕರೆದರೆ ಮತ್ತೊಮ್ಮೆ ಸಭೆಗೆ ಹೋಗಲು ಸಿದ್ಧ. ಅಧಿಕಾರ ಎಂದಿಗೂ ಯಾರಿಗೂ ಶಾಶ್ವತವಲ್ಲ. ಭಿನ್ನಮತದಿಂದ ಜನರ ಮುಂದೆ ಇನ್ನಷ್ಟು ತಲೆ ತಗ್ಗಿಸುವ ಕೆಲಸವಾಗುವುದು ಬೇಡ ಎಂದು ಸದಾನಂದ ದುಃಖದಿಂದ ಹೇಳಿದ್ದಾರೆ.












Click it and Unblock the Notifications