ಲೋಕ ಕಲ್ಯಾಣಕ್ಕಾಗಿ ಭೂಮಿಯೊಳಗಿಳಿದ ಸ್ವಾಮೀಜಿ
ಯಾದಗಿರಿ,
ಫೆ. 23 : ಜಿಲ್ಲೆಯ ಸುರಪುರ ಪಟ್ಟಣದ ತಿಮ್ಮಾಪೂರ್ ಅಗಸಿಯ ಗುಡ್ಡದ ಮೇಲಿರುವ ಜಗದ್ಗುರು ಶ್ರೀ ನಾಲವಾರ ಕೋರಿ ಸಿದ್ದೇಶ್ವರ ಜನ್ಮಸ್ಥಳದ ಸಿದ್ದೇಶ್ವರ ಸ್ವಾಮಿಗಳ ಸನ್ನಿಧಿಯ ಮುಂಭಾಗದಲ್ಲಿ ಭೂಮಿ ಒಳಗೆ ಶ್ರೀ ಆದಿಶೇಷ ಗುರುಗಳು 21 ದಿನ ಭೂಗತರಾಗಿದ್ದಾರೆ. id="toptextpromo">ಫೆ.
13ರಿಂದ ಭಕ್ತರ ಸಮೂಹದಲ್ಲಿ ಪೂಜೆ ನೆರವೇರಿಸಿ ಭೂಮಿ ಒಳಗೆ ತಪಸ್ಸಿಗೆ ಕುಳಿತಿದ್ದಾರೆ. ಮುಂದಿನ ತಿಂಗಳು ಮಾರ್ಚ್ 4ರಂದು ಸ್ವಾಮಿಗಳು ಹೊರಬರುತ್ತಾರೆ. ಯಾವುದೇ ರೀತಿಯಿಂದ ಆಹಾರ ಸೇವನೆ ಇಲ್ಲ. ಕುಡಿಯಲು ಸ್ವಲ್ಪ ನೀರು. ಆದೀಶೇಷ ಗುರುಗಳು ಈ ಭಾಗದ ಬಿಸಿಲಿನ ತಾಪವನ್ನು ಲೆಕ್ಕಿಸದೆ ಗುಡ್ಡದಲ್ಲಿ 21 ದಿನಳವರೆಗೂ ಭೂಮಿ ಒಳಗೆ ತಪಸ್ಸು ಮಾಡುತ್ತಿರುವುದು ಭಕ್ತರಲ್ಲಿ ಪವಾಡದ ರೀತಿಯಲ್ಲಿ ಕಾಣುತ್ತಿದೆ. id='are-slot-1' class='oiad oi-axt oiadv'> id='top-searched-articles'>ಭೂ
ಸಮಾಧಿಗೆ ಸಣ್ಣದೊಂದು ಕಿಂಡಿ ಬಿಡಲಾಗಿದೆ. ಅದರಲ್ಲಿ ಗಾಳಿ ಬರುತ್ತದೆ. ಜೀವಕ್ಕೆ ಏನೂ ಅಪಾಯವಿಲ್ಲ. ಆದ್ರೆ 21 ದಿನಗಳವರೆಗೂ ಊಟ ಇಲ್ಲದೆ ಸ್ವಾಮಿಗಳು ಭೂಮಿ ಒಳಗೆ ಹೇಗೆ ಇರುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಜನ ಮರಳೋ ಜಾತ್ರೆ ಮರಳೋ ಎಂಬಂತೆ ಸಹಸ್ರಾರು ಸಂಖ್ಯೆಯಲ್ಲಿ ಸ್ವಾಮೀಜಿಗಳನ್ನು ನೋಡಲು ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ.











Click it and Unblock the Notifications