ಶಾಸಕ ವಿಶ್ವನಾಥ ಆಪ್ತರ ಮನೆ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು,ಫೆ.
23: ಲೋಕಾಯುಕ್ತ ಪೊಲೀಸರು HALನ ಮಾಜಿ ನೌಕರ, ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಅವರ ಅತ್ಯಾಪ್ತರ ಮನೆಯ ಮೇಲೆ ಗುರುವಾರ ಬೆಳಗ್ಗೆ ಮತ್ತೆ ದಾಳಿಯಿಟ್ಟಿದ್ದಾರೆ. ಬೆಂಗಳೂರಿನ ಉತ್ತರ ಭಾಗದಲ್ಲಿ ಒಟ್ಟು 6 ಕಡೆ ಈ ದಾಳಿಗಳು ನಡೆದಿವೆ. id="toptextpromo">ವಿಶ್ವನಾಥರ
ಬಂಧುಗಳು ಮತ್ತು ಆಪ್ತ ಸ್ನೇಹಿತ ಸೋಮಶೇಖರ ರೆಡ್ಡಿಗೆ ಸೇರಿದ ನಿವಾಸಗಳು, ಪೆಟ್ರೋಲ್ ಬಂಕುಗಳ ಮೇಲೆ ಡಿವೈಎಸ್ಪಿ ಶಿವಶಂಕರ್ ತಂಡ ದಾಳಿಯಿಟ್ಟಿದೆ. ಯಲಹಂಕ, ರಾಜಾನುಕುಂಟೆ, ಹೆಬ್ಬಾಳ ಭಾಗಗಳಲ್ಲಿ ದಾಳಿಗೊಳಗಾದ ಸ್ಥಳಗಳಿವೆ. id='are-slot-1' class='oiad oi-axt oiadv'> id='top-searched-articles'>ಸುಮಾರು
2 ತಿಂಗಳ ಹಿಂದೆ (ಡಿ. 19) ಇದೇ ರೀತಿ ಲೋಕಾಯುಕ್ತ ಪೊಲೀಸರು ವಿಶ್ವನಾಥರ ಅಕ್ರಮ ಆಸ್ತಿಯ ಬೇಟೆಯಾಡಿದ್ದರು. ಇಂದು ಯಡಿಯೂರಪ್ಪ ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿಯೆಬ್ಬಿಸಲು ಸಜ್ಜಾಗುತ್ತಿರುವ ಸಂದರ್ಭದಲ್ಲೇ ಅವರ ಖಾಸಾ ಶಿಷ್ಯ ವಿಶ್ವನಾಥ್ ಮೇಲೆ ಮತ್ತೆ ಮರುಕೊಂಡುಬಿದ್ದಿರುವುದು ಸೋಜಿಗ ತಂದಿದೆ.











Click it and Unblock the Notifications