ಬಿಜಾಪುರ ಯುವ ಕಾಂಗ್ರೆಸ್ ಮುಖಂಡನ ಕೈ ತುಂಡು
ಬಿಜಾಪುರ,
ಫೆ. 22 : ಹೋಳಿ ಹುಣ್ಣಿಮೆಗೆ ಮೊದಲೇ ಬಿಜಾಪುರದಲ್ಲಿ ಹಾಡುಹಗಲೆ ರಕ್ತದೋಕುಳಿಯಾಡಲಾಗಿದೆ. ದುಷ್ಕರ್ಮಿಗಳು ಸಾರ್ವಜನಿಕರೆದುರಿಗೇ ಯುವ ಕಾಂಗ್ರೆಸ್ ಮುಖಂಡನ ಎರಡೂ ಕೈಗಳನ್ನು ಕತ್ತರಿಸಿ ಪರಾರಿಯಾಗಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದೆ. id="toptextpromo">ಯುವ
ಕಾಂಗ್ರೆಸ್ ಅಧ್ಯಕ್ಷನಾಗಿದ್ದ ಅಸಿಫ್ ಇನಾಂದಾರ್ ಎಂಬ ವ್ಯಕ್ತಿ ನಗರ ಬಸ್ ನಿಲ್ದಾಣದಿಂದ ಕೋರ್ಟಿಗೆ ಹೋಗುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಆತನ ಮೇಲೆರೆಗಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಆತನ ಎಡಮುಂಗೈ ಸಂಪೂರ್ಣ ತುಂಡಾಗಿದ್ದು, ಬಲಗೈಗೂ ಗಂಭೀರ ಗಾಯಗಳಾಗಿವೆ. id='are-slot-1' class='oiad oi-axt oiadv'> id='top-searched-articles'>ಹಳೆ
ವೈಷಮ್ಯವೇ ಈ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಾಗುವ ಬಗ್ಗೆ ಪೊಲೀಸರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದರೂ ಅವರು ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಅಸಿಫ್‌ನ ಸಂಬಂಧಿಗಳು ದೂರಿದ್ದಾರೆ.











Click it and Unblock the Notifications