ಬೆನ್ನಿಗೆ ಚೂರಿ ಹಾಕಿದ ಯಡ್ಡಿ ನಮ್ಮ ಪಕ್ಷಕ್ಕೆ ಬೇಡ

ಭ್ರಷ್ಟಾಚಾರ, ಅಧಿಕಾರ ಮದದಿಂದ ಮೆರೆಯುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಜನತೆ ಮುಂದಿನ ಚುನಾವಣೆ ತಕ್ಕ ಪಾಠ ಕಲಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಾಶಿ ತೀರ್ಥಯಾತ್ರೆ ಮಾಡಿದಂತೆ ಬಿಜೆಪಿ ನಾಯಕರು ಖಾಯಂ ಆಗಿ ತೀರ್ಥಯಾತ್ರೆ ಮುಂದುವರೆಸಬೇಕಾಗುತ್ತದೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಶೀಘ್ರದಲ್ಲೇ ಸ್ವಾಭಿಮಾನಿ ಕರ್ನಾಟಕ ಪಕ್ಷದ ರಾಜ್ಯ ಯಾತ್ರೆ ಆರಂಭಿಸಲಾಗುವುದು. ಮುಂಬರುವ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಪಕ್ಷದ ಚಿಹ್ನೆ ಗೊಂದಲದಿಂದ ಪಕ್ಷದ ರಚನೆ ಹಾಗೂ ಉದ್ಘಾಟನೆ ವಿಳಂಬವಾಗುತ್ತಿದೆ. ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಕಚೇರಿಗಳು ಸಿದ್ಧವಾಗಿದೆ ಎಂದು ಶ್ರೀರಾಮುಲು ಹೇಳಿದರು.
ಯಡ್ಡಿ ಸಹವಾಸ ಬೇಡ : ಬಳ್ಳಾರಿ ರೆಡ್ಡಿಗಳಿಗೆ ಬೆನ್ನು ತೋರಿಸಿ, ನಮ್ಮ ಬಳ್ಳಾರಿ ಜನತೆ ಬೆನ್ನಿಗೆ ಚೂರಿ ಹಾಕಿದ ಯಡಿಯೂರಪ್ಪ ಅವರನ್ನು ಎಂದಿಗೂ ನಮ್ಮ ಪಕ್ಷಕ್ಕೆ ಆಹ್ವಾನಿಸುವುದಿಲ್ಲ. ಜನಾರ್ದನ ರೆಡ್ಡಿ ಅವರು ಜೈಲಿಗೆ ಹೋಗಲು ಯಡಿಯೂರಪ್ಪ ಅವರೇ ಕಾರಣ. ಅವರು ಕಾಲಿಟ್ಟರೆ ಏಳಿಗೆಯಾಗುವುದಿಲ್ಲ. ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಯಾವುದೇ ಪ್ರಸ್ತಾಪ ಬಂದಿಲ್ಲ. ನಾನು ಯಾವುದೇ ಪಕ್ಷದ ಜೊತೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.











Click it and Unblock the Notifications