ಫೆಬ್ರವರಿ ತಿಂಗಳ ಅಂತ್ಯಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ

ಭಾನುವಾರ(ಫೆ.19)ದಂದು ಆಲ್ದೂರು ಹುಣಸೇಮಕ್ಕಿ ಸಮೀಪದ ಕೋಡೆವೂರು ದೇವಳದ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ದೇವೇಗೌಡರು ಈ ಬಗ್ಗೆ ಹೇಳಿದರು.
ಎರಡೂ ಜಿಲ್ಲೆಗಳ ಮುಖಂಡರ ಮತ್ತು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಜನವಾಹಿನಿ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಚಿಕ್ಕಮಗಳೂರಿನಲ್ಲಿ ಮತ್ತೆ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆಯಲಿದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟರು.
ಚುನಾವಣೆಯನ್ನು ಎದುರಿಸಲು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತುಗಂಭೀರ ಚಿಂತನೆಗಳು ನಡೆಯುತ್ತಿದೆ. ಜನ ಬೆಂಬಲ ಕಳೆದುಕೊಂಡಿರುವ ಬಿಜೆಪಿ ನಿರ್ನಾಮ ಖಚಿತ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದದ ಜನ ವಿರೋಧಿ ಮತ್ತು ರೈತ ವಿರೋಧಿ ನೀತಿಯಿಂದ ಜನತೆ ಕಂಗೆಟ್ಟಿದ್ದಾರೆ. ಜೆಡಿಎಸ್ ಪಕ್ಷದತ್ತ ಒಲವು ಹರಿಸಿ ನಮ್ಮ ಅಭ್ಯರ್ಥಿಗೆ ಜಯ ತಂದುಕೊಡಲಿದ್ದಾರೆ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications