ವಿದ್ಯುತ್ ಉತ್ಪಾದನೆ, ಪ್ರಸರಣ ಅಸಮರ್ಪಕವೇ ಕಾರಣ?

* 1819 ಅಡಿ ಇರುವ ಲಿಂಗನಮಕ್ಕಿ ಜಲಾಶಯದಿಂದ 2690 ದಶಲಕ್ಷ ಯೂನಿಟ್.
* ಸೂಪಾ ಜಲಾಶಯದಿಂದ 1435 ದಶಲಕ್ಷ ಯೂನಿಟ್.
* ಮಾಣಿ ಜಲಾಶಯದಿಂದ 412 ದಶಲಕ್ಷ ಯೂನಿಟ್.
ಎಲ್ಲಾ ಜಲಾಶಯಗಳು ತುಂಬಿ ತುಳುಕಿದರೆ ನಿಮ್ಮ ಮನೆಯಲ್ಲಿ ಬಲ್ಬ್ ಉರಿಯಲು ಸಾಧ್ಯ. ಆದರೆ, ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣ. ಅಗತ್ಯಕ್ಕಿಂತ ಹೆಚ್ಚುತ್ತಿರುವ ಬೇಡಿಕೆ.
ಪರರಾಜ್ಯ, ಕಂಪನಿಗಳಿಂದ ಸಾಲ : ವಿವಿಧ ಮೂಲಗಳಿಂದ ವಿದ್ಯುತ್ 850 ದಶಲಕ್ಷ ಯೂನಿಟ್ ನಿಂದ 500 ದಶಲಕ್ಷ ಯೂನಿಟ್ ಸಂಗ್ರಹಿಸಲಾಗುತ್ತಿದೆ. ಜಿಂದಾಲ್ ಸಂಸ್ಥೆ. ರಿಲಯನ್ಸ್ ಹಾಗೂ ಛತ್ತೀಸ್ ಗಡ ಕಂಪನಿಗಳ ವಿದ್ಯುತ್ ಕೂಡಾ ಪಡೆಯಲಾಗುತ್ತಿದೆ. ಉಡುಪಿ, ಬಳ್ಳಾರಿ ಘಟಕ ಆರಂಭಕ್ಕೆ ಕಾಯಬೇಕಿದೆ.
ಹೀಗೆ ಜಲಾಶಯ ಹಾಗೂ ಪರರಾಜ್ಯದಿಂದ ಬಂದ ವಿದ್ಯುತ್ ಆನ್ನು ಐದು ವಿದ್ಯುತ್ ಪ್ರಸರಣ ಸಂಸ್ಥೆ ಮೂಲಕ ವಿವಿಧೆಡೆ ಹಂಚಲಾಗುತ್ತದೆ. ಬೆಸ್ಕಾಂ(ಬೆಂಗಳೂರು) ಹೆಸ್ಕಾಂ(ಹುಬ್ಬಳ್ಳಿ), ಜೆಸ್ಕಾಂ(ಗುಲ್ಬರ್ಗಾ), ಮೆಸ್ಕಾಂ(ಮಂಗಳೂರು), ಚೆಸ್ಕಾಂ(ಮೈಸೂರು)
ಬೆಂಗಳೂರಿನಲ್ಲಿ ಸುಮಾರು 4.5 ಲಕ್ಷ ವಾಣಿಜ್ಯ ಉದ್ದೇಶಿತ ವಿದ್ಯುತ್ ಬಳಕೆ ದಾರರಿದ್ದಾರೆ. ಮಾಲ್, ಕಾಂಪ್ಲೆಕ್ಸ್ ಗಳಲ್ಲಿ ಬಳಕೆ ಮಾಡುವ ವಿದ್ಯುತ್ ಬಗ್ಗೆ ನಿಗಾವಹಿಸಲು ಬೆಸ್ಕಾಂ ನಿರ್ಧರಿಸಿದೆ.
ಕೈಗಾರಿಕೆ ಹಾಗೂ ಮಾಲ್ ಗಳಲ್ಲಿ ಬಳಕೆಯಾಗುತ್ತಿರುವ ವಿದ್ಯುತ್ ಪ್ರಮಾಣವನ್ನು ಶೇ.10 ರಷ್ಟು ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬೆಸ್ಕಾಂ ಹೇಳಿದೆ. ಬೇಸಿಗೆಯಲ್ಲಿ ವಿದ್ಯುತ್ ಉಳಿಸಿ ಅಭಿಯಾನ ಆರಂಭಿಸಲು ಎಸ್ಕಾಂಗಳು ಮುಂದಾಗಿದೆ. ಆದರೆ, ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾದರೆ ತಾನೇ ಉಳಿಸುವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.












Click it and Unblock the Notifications