ಹೆಣ್ಣು ಹೆತ್ತ ತಪ್ಪಿಗೆ ಮೂರು ಅಮಾಯಕ ಜೀವ ಬಲಿ

ಗಂಡನಿಂದ ಗಂಡು ಸಂತಾನ ಕರುಣಿಸದಿದ್ದಕ್ಕಾಗಿ ಕುಹಕದ ನುಡಿಗಳನ್ನು ಆಗಾಗ ಕೇಳುತ್ತಿದ್ದ 30 ವರ್ಷದ ಮಹಿಳೆ ಗಾಯತ್ರಿ ಬಾಲಾಜಿ ಮತ್ತು ಮೂರು ವರ್ಷದ ಮಗಳು ಮಹಿಕಾ ನೇಣಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಇನ್ನೂ ಹೃದಯವಿದ್ರಾವಕ ಸಂಗತಿಯೆಂದರೆ, 9 ತಿಂಗಳ ಮಗಳು ವಿಭಾಳ ದೇಹ ಬಕೆಟ್ಟಿನಲ್ಲಿ ದೊರೆತಿದೆ.
ಒಂದೇ ಸೀರೆಯನ್ನು ದೊಡ್ಡ ಮಗಳನ್ನು ನೇಣಿಗೆ ಹಾಕಲು ಮತ್ತು ತಾವು ನೇಣಿಗೆ ಶರಣಾಗಲು ಗಾಯತ್ರಿ ಬಳಸಿದ್ದಾರೆ. ಸಾಯುವ ಮುನ್ನ ಮರಣ ಪತ್ರ ಬರೆದಿಟ್ಟಿರುವ ಗಾಯತ್ರಿ, ತಮ್ಮ ಸಾವಿಗೆ ಯಾರೂ ಕಾರಣರಲ್ಲ, ಇಂಥ ಕೃತ್ಯ ಎಸಗುತ್ತಿರುವುದಕ್ಕಾಗಿ ದಯವಿಟ್ಟು ಕ್ಷಮಿಸಿ ಎಂದು ಹೇಳಿದ್ದಾರೆ.
ಈ ಸಾವಿಗೆ ಯಾರೂ ಕಾರಣರಲ್ಲ ಎಂಬ ಸಂಗತಿಯನ್ನು ಒಪ್ಪಲು ನೆರೆಹೊರೆಯವರು ಒಪ್ಪುತ್ತಿಲ್ಲ. ಹೆಂಡತಿಯ ಜೊತೆ ಗಂಡ ಬಾಲಾಜಿ ಪ್ರತಿನಿತ್ಯ ಅಮಾನವೀಯವಾಗಿ ವರ್ತಿಸುತ್ತಿದ್ದ. ಹೆಣ್ಣು ಹೆತ್ತಿದ್ದಕ್ಕಾಗಿ ದಿನಾಲು ಬಡಿಯುತ್ತಿದ್ದ ಮತ್ತು ಮೂದಲಿಸುತ್ತಿದ್ದ. ಆಗಾಗ ಯಾಕಾದರೂ ಬದುಕಿದ್ದೀಯಾ ಎಂದು ಚುಚ್ಚಿ ಮಾತನಾಡುತ್ತಿದ್ದ ಎಂದು ಅಕ್ಕಪಕ್ಕದವರು ಪೊಲೀಸರಿಗೆ ತಿಳಿಸಿದ್ದಾರೆ.












Click it and Unblock the Notifications