ಲೋಕಾ ನೇಮಕಕ್ಕೆ ಚುನಾವಣೆ ನೀತಿ ಸಂಹಿತೆ ಅಡ್ಡಿ ಇಲ್ಲ
ಬೆಂಗಳೂರು,ಫೆ.17:
ಬಜೆಟ್ ಮಂಡನೆ, ಸಂಪುಟ ವಿಸ್ತರಣೆ ಹಾಗೂ ಲೋಕಾಯುಕ್ತ ನೇಮಕಾತಿ ಎಲ್ಲವೂ ಉಪ ಚುನಾವಣೆ ಬಳಿಕ ಎಂದು ಸಿಎಂ ಸದಾನಂದ ಗೌಡರು ಘೋಷಿಸಿದ್ದಾರೆ. ಆದರೆ, ಲೋಕಾಯುಕ್ತ ನೇಮಕಕ್ಕೆ ಚುನಾವಣೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಿ.ಎಸ್ ಸುರಂಜನ್ ಸ್ಪಷ್ಟಪಡಿಸಿದ್ದಾರೆ. id="toptextpromo">ನ್ಯಾ.
ಬನ್ನೂರುಮಠ ಅವರು ಲೋಕಾಯುಕ್ತ ಪೀಠ ಬೇಡ ಎಂದು ಹಿಂದೆ ಸರಿದ ಮೇಲೆ ಸದಾನಂದ ಗೌಡರ ಸರ್ಕಾರ ಯಾವುದೇ ಹೊಸ ಹೆಸರನ್ನು ಸೂಚಿಸಿಲ್ಲ. ಈ ನಡುವೆ ನೂತನ ಲೋಕಾಯುಕ್ತ ನೇಮಕಾತಿ ಸಂಬಂಧವಾಗಿ ನಿವೃತ್ತ ನ್ಯಾಯಾಧೀಶರೊಬ್ಬರನ್ನು ಶಿಫಾರಸ್ಸು ಮಾಡಿದ್ದರೂ ಅನಗತ್ಯ ನೆಪವೊಡ್ಡಿ ಲೋಕಾಯುಕ್ತ ನೇಮಕಾತಿ ವಿಳಂಬ ಮಾಡುತ್ತಿರುವ ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ಸದಾನಂದ ಗೌಡರ ಸರ್ಕಾರ ಮುಂದಾಗಿದೆ. id='are-slot-1' class='oiad oi-axt oiadv'> id='top-searched-articles'>ಉಡುಪಿ
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕವನ್ನು ಗುರುವಾರ(ಫೆ.16) ರಂದು ಪ್ರಕಟಿಸಲಾಗಿದೆ. ಫೆ.16ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೊಂಡಿದೆ. ಮಾ.18ರಂದು ಮತದಾನ ನಡೆಯಲಿದ್ದು, ಮಾ.22ರಂದು ಫಲಿತಾಂಶ ಹೊರಬೀಳಲಿದೆ. ಮಾ.22 ರ ನಂತರ ಲೋಕಾಯುಕ್ತ ನೇಮಕಾತಿ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸದಾನಂದ ಗೌಡರು ಶುಕ್ರವಾರ(ಫೆ.17) ಪ್ರಕಟಿಸಿದ್ದಾರೆ.











Click it and Unblock the Notifications