ಅಪ್ಪ-ಅಮ್ಮನನ್ನು ಗೌರವಿಸಿ: ಬಂಗಾರಪ್ಪ ಪುತ್ರ ಕುಮಾರ್
ಸಾಗರ,
ಫೆ. 17: ಅಪ್ಪ-ಅಮ್ಮ ನಮ್ಮ ಬದುಕಿನ ದಾರಿದೀಪಗಳು. ಇವರಿಗೆ ಯಾವುದೇ ಸಂದರ್ಭದಲ್ಲಿ ಅಗೌರವ ತೊರಬಾರದು. ಹಾಗೆಯೇ ಅಕ್ಷರ ಕಲಿಸುವ ಗುರುಗಳನ್ನೂ ಗೌರವದಿಂದ ಕಾಣಬೇಕು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಿವಿಮಾತು ಹೇಳಿದರು. id="toptextpromo">ತಾಲೂಕಿನ
ತಾಳಗುಪ್ಪದ ಸೈದೂರಿನ ಶಾಂತವೇರಿ ಗೋಪಾಲಗೌಡ ಪ್ರೌಢಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ನಡೆಸುವುದು ಸವಾಲಿನ ಕೆಲಸ. ಅದರಲ್ಲೂ ಅನುದಾನ ರಹಿತ ಶಾಲೆಗಳು ತೀವ್ರ ಸಂಕಷ್ಟದಲ್ಲಿವೆ. ಇಂತಹ ಸಂದರ್ಭದಲ್ಲೂ ಶಿಕ್ಷಕರು ಪೂರ್ಣ ಪ್ರಮಾಣದ ಆಸ್ಥೆಯಿಂದ ಪಾಠಪ್ರವಚನ ಒದಗಿಸುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಸರ್ಕಾರಿ
ಶಾಲೆ ಬಂದ್ -ಖಾಸಗಿಯವರ ಲಾಬಿ: ಜಿಪಂ ಸದಸ್ಯೆ ಲಲಿತಾ ನಾರಾಯಣ್ ವಾರ್ಷಿಕ ಪ್ರಶಸ್ತಿ ವಿತರಿಸಿ ಮಾತನಾಡಿ, ರಾಜ್ಯ ಸರ್ಕಾರದ ಶಿಕ್ಷಣ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಿದೆ. ಒಂದೆಡೆ ಮಕ್ಕಳ ಕೊರತೆಯ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದರೆ, ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಹೊಂದಿದ ಹಲವು ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳಿಗೆ ಅನುದಾನ ಕೊಡಲು ಮೀನಾಮೇಷ ಎಣಿಸಲಾಗುತ್ತಿದೆ. ಇದರ ಹಿಂದೆ ಖಾಸಗಿ ಆಂಗ್ಲ ಮಾಧ್ಯಮದ ಲಾಬಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಕಾರ್ಯಕ್ರಮದಲ್ಲಿ ಎಚ್.ಎನ್. ದಿವಾಕರ್, ಹುಚ್ಚಪ್ಪ, ಸೈದೂರು ಗ್ರಾಪಂ ಅಧ್ಯಕ್ಷ ಮಂಜಪ್ಪ,ಬಿ.ಜಿ. ಗುರುಮೂರ್ತಿ, ಸುಜಾತಾ ರವೀಂದ್ರ ಉಪಸ್ಥತರಿದ್ದರು.











Click it and Unblock the Notifications