ಅಶ್ಲೀಲ ವಿಡಿಯೋ : ಡಿವಿಎಸ್, ಬೋಪಯ್ಯ ರಹಸ್ಯ ಚರ್ಚೆ

ಈ ಹಗರಣದ ತನಿಖೆಯಾಗಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಏಳು ಸದಸ್ಯರ ಸಮಿತಿ ರಚಿಸಿ ಮಾರ್ಚ್ 13ರ ಡೆಡ್‌ಲೈನ್ ನೀಡಿದ್ದಾರೆ. ಆದರೆ, ಈ ಸಮಿತಿಯನ್ನು ವಿರೋಧ ಪಕ್ಷಗಳು ಧಿಕ್ಕರಿಸಿ ಡಿ.ವಿ. ಸದಾನಂದ ಗೌಡರ ಸರಕಾರಕ್ಕೆ ಸೆಡ್ಡು ಹೊಡೆದಿವೆ. ಮೂವರನ್ನು ಅನರ್ಹಗೊಳಿಸಲೇಬೇಕು ಎಂದು ಪಟ್ಟುಹಿಡಿದಿವೆ.
ಸಮಿತಿಯನ್ನು ಧಿಕ್ಕರಿಸಿರುವ ಹಿನ್ನೆಲೆಯಲ್ಲಿ ಬೋಪಯ್ಯ ಅವರನ್ನು ತುರ್ತಾಗಿ ಸಂಪರ್ಕಿಸಿರುವ ಮುಖ್ಯಮಂತ್ರಿ ಸದಾನಂದ ಗೌಡ ಅವರು ಶುಕ್ರವಾರ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಇಬ್ಬರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಯಾವ ಅಧಿಕಾರಿಗಳು ಕೂಡ ಭಾಗಿಯಾಗಿರಲಿಲ್ಲ.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸದಾನಂದ ಗೌಡರು, ಅಶ್ಲೀಲ ಚಿತ್ರ ವೀಕ್ಷಣೆಯ ಸತ್ಯಾಸತ್ಯತೆಗಳು ಹೊರಬೀಳಬೇಕಾದರೆ ಮತ್ತು ಪಾರದರ್ಶಕವಾಗಿ ತನಿಖೆ ನಡೆಯಬೇಕಾದರೆ ವಿರೋಧ ಪಕ್ಷಗಳು ಸಮಿತಿಯಲ್ಲಿ ಭಾಗಿಯಾಗಲೇಬೇಕು. ವಿರೋಧ ಪಕ್ಷಗಳ ಮನವೊಲಿಸಲು ಮತ್ತೆ ಪ್ರಯತ್ನ ನಡೆಸುತ್ತೇನೆ ಎಂದಿದ್ದಾರೆ.












Click it and Unblock the Notifications