ಚುನಾವಣೆ ಬಳಿಕ ಬಜೆಟ್, ಸಂಪುಟ ವಿಸ್ತರಣೆ: ಸಿಎಂ
ಬೆಂಗಳೂರು,
ಫೆ.17: ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಉಪ ಚುನಾವಣೆ (ಮತದಾನ , ಭಾನುವಾರ ಮಾ.18) ಬಳಿಕ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಹಾಗೂ 2012-13 ಸಾಲಿನ ಬಜೆಟ್ ಮಂಡನೆ ಬಗ್ಗೆ ಯೋಚಿಸುವುದಾಗಿ ಸಿಎಂ ಸದಾನಂದ ಗೌಡ ಅವರು ಶುಕ್ರವಾರ ಹೇಳಿದ್ದಾರೆ. ಫಲಿತಾಂಶ ಬುಧವಾರ ಮಾ. 22. id="toptextpromo">ಸುಮಾರು
18 ವಿವಿಧ ಖಾತೆಗಳ ಭಾರವನ್ನು ಹೊತ್ತಿರುವ ಸದಾನಂದ ಅವರು ಇನ್ನೂ ಒಂದೂವರೆ ತಿಂಗಳುಗಳ ಕಾಲ ಇನ್ನಷ್ಟು ಹೈರಾಣಾಗುವುದು ಖಾತ್ರಿ. ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆಯನ್ನು ಮಾ.2 ರೊಳಗೆ ಬಗೆಹರಿಸುವುದಾಗಿ ಪಕ್ಷದ ಅಧ್ಯಕ್ಷ ಕೆಎಸ್ ಈಶ್ವರಪ್ಪ ಗುರುವಾರ ಹೇಳಿದ್ದನ್ನು ಇಲ್ಲಿ ನೆನೆಯಬೇಕು. id='are-slot-1' class='oiad oi-axt oiadv'> id='top-searched-articles'>ಆದರೆ,
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದ ಗೌಡ, ಉಪ ಚುನಾವಣೆಗೆ ಬಿಜೆಪಿ ಸರ್ವಸನ್ನದ್ಧವಾಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತೇವೆ. ಬಜೆಟ್ ಸಿದ್ಧತೆ ಕೂಡ ಜಾರಿಯಲ್ಲಿದೆ. ಸಂಪುಟ ವಿಸ್ತರಣೆಯಲ್ಲಿ ಅನುಭವಿಗಳಿಗೆ ಆದ್ಯತೆ ನೀಡಲಾಗುವುದು. ಎಲ್ಲವೂ ಚುನಾವಣೆ ಬಳಿಕ ತೀರ್ಮಾನವಾಗಲಿದೆ ಎಂದಿದ್ದಾರೆ.











Click it and Unblock the Notifications