ಉಡುಪಿ- ಚಿಕ್ಕಮಗಳೂರು ಉಪಚುನಾವಣೆ ಮಾ18ಕ್ಕೆ
ನವದೆಹಲಿ,
ಫೆ.17: ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿರುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕ್ಷೇತ್ರದ ಹಿಂದಿನ ಸಂಸದ ಡಿ.ವಿ. ಸದಾನಂದಗೌಡರು ಕಳೆದ ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿಯಾದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆಯಲಿದೆ. ಇದೇ ವೇಳೆ 5 ರಾಜ್ಯಗಳಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲೂ ಉಪಚುನಾವಣೆ ನಡೆಯಲಿದೆ. id="toptextpromo">ಈ
ತಿಂಗಳ 22ರಂದು ಬುಧವಾರ ಅಧಿಸೂಚನೆ ಹೊರಡುವುದರೊಂದಿಗೆ ಚುನಾವಣಾ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ನಾಮಪತ್ರಗಳ ಸಲ್ಲಿಕೆಗೆ 29ರಂದು ಬುಧವಾರ ಕೊನೆ ದಿನ. ಮಾರ್ಚ್ 1ರಂದು ಗುರುವಾರ ನಾಮಪತ್ರಗಳ ಪರಿಶೀಲನೆಯಾಗಲಿದ್ದು, 3ರಂದು ಶನಿವಾರ ನಾಮಪತ್ರಗಳನ್ನು ಹಿಂದೆ ಪಡೆಯಲು ಕಡೇ ದಿನ. id='are-slot-1' class='oiad oi-axt oiadv'> id='top-searched-articles'>18ರಂದು
ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ. 21ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.











Click it and Unblock the Notifications