ಯಾದಗಿರಿ : ಕೃಷಿ ಇಲಾಖೆಯಿಂದ ರಾಷ್ಟ್ರಧ್ವಜಕ್ಕೆ ಅವಮಾನ
ಯಾದಗಿರಿ,
ಫೆ. 17 : ಫೆ. 14ರಂದು ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ನಿಧನರಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿತ್ತು. ಗೌರವ ಸೂಚಕವಾಗಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಶೋಕಾಚರಣೆ ಮಾಡಲಾಗಿತ್ತು. ಆದರೆ ಶೋಕಾಚರಣೆ ಫೆ.16ರಂದೇ ಮುಕ್ತಾಯವಾದರೂ ಯಾದಗಿರಿಯಲ್ಲಿ ಶುಕ್ರವಾರ ಕೂಡ ಅರ್ಧ ಇಳಿಸಿದ ರಾಷ್ಟ್ರಧ್ವಜ ಹಾರಾಡುತ್ತಿತ್ತು. id="toptextpromo">ಯಾದಗಿರಿಯ
ಸಹಾಯಕ ಕೃಷಿ ಅಧಿಕಾರಿ ಕಾರ್ಯಲಯದ ಮುಂದೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರ್ಧಕ್ಕೆ ರಾಷ್ಟ್ರಧ್ವಜ ಹಾರಾಡುತ್ತಿತ್ತು. ಮೂರು ದಿನಗಳ ಶೋಕಾಚರಣೆ ನಿನ್ನೆನೆ ಮುಕ್ತಾಯವಾಗಿತ್ತು. ಸಾರ್ವಜನಿಕರು ಈ ಸಂಗತಿಯನ್ನು ಸಹಾಯಕ ಕೃಷಿ ಅಧಿಕಾರಿ ರಾಜಣ್ಣ ಗಮನಕ್ಕೆ ತಂಗಾದ ಕಕ್ಕಾಬಿಕ್ಕಿಯಾದ ರಾಜಣ್ಣ ಸಿಬ್ಬಂದಿಗಳ ನೆರವಿನಿಂದ ರಾಷ್ಟ್ರಧ್ವಜವನ್ನು ಕಾಲಲ್ಲಿ ಚಪ್ಪಲಿ ಹಾಕಿಕೊಂಡೇ ಕೆಳಗೆ ಇಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಾಷ್ಟ್ರಧ್ವಜವನ್ನು
ಕೆಳಗೆ ಇಳಿಸುವಾಗ ಅದರದೆ ಆದ ಗೌರವ ಮತ್ತು ನೀತಿ ನಿಯಮಗಳು ಇರುತ್ತವೆ. ಆದರೆ, ಬೇಜವಬ್ದಾರಿ ಅಧಿಕಾರಿಗಳು ನಿಯಮಗಳನ್ನು ಪಾಲಿಸದೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಇದು ಇಡೀ ನಾಗರಿಕ ಸಮುದಾಯ ತಲೆ ತಗಿಸುವಂತೆ ಮಾಡಿದೆ. ಇನ್ನು ಮುಂದಾದರೂ ಇಂತಹ ಅಚಾತುರ್ಯ ನಡೆಯದಂತೆ ನೋಡಿಕೊಳ್ಳಲಿ ಎಂದು ನಾಗರಿಕರು ಹಿಡಿಶಾಪ ಹಾಕಿದ್ದಾರೆ.











Click it and Unblock the Notifications