ಹಸುಗೂಸಿಗೆ ಹೃದ್ರೋಗ, ಚಾಚಿಬಂದ ಸಹಾಯಹಸ್ತ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಮುದ್ದಪ್ಪ ಹಾಗೂ ನಿರ್ಮಲಾ ದಂಪತಿಗಳ ಏಕೈಕ ಮಗ ಶ್ರೀನಿವಾಸ (5 ತಿಂಗಳು) ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಜೀವನ ನಿರ್ವಹಣೆಗೆ ಕೂಲಿನಾಲಿ ಮಾಡಿಕೊಂಡಿರುವ ಈ ದಂಪತಿಗಳಿಗೆ ತಮ್ಮ ಮಗ ಜೀವ ಹಿಂಡುವ ರೋಗಕ್ಕೆ ತುತ್ತಾಗಿರುವುದು ಆಕಾಶ ಕಳಚಿ ಬಿದ್ದಂತಾಗಿದೆ.
ಹೊಟ್ಟೆಪಾಡಿಗಾಗಿ ಮುಂಬೈ, ಬೆಂಗಳೂರು, ಪೂನಾ, ಅಂತ ಊರೂರು ತಿರುಗುವ ಈ ದಂಪತಿಗಳಿಗೆ ವಾಸಕ್ಕೆ ಒಂದು ಯೋಗ್ಯ ಮನೆ ಹಾಗೂ ಉದ್ಯೋಗವಿಲ್ಲದೆ ಅಲೆಮಾರಿ ಜೀವನ ನಡೆಸುತ್ತಿದ್ದು, ಈಗ ಮಗುವಿನ ಕಾಯಿಲೆ ಅವರನ್ನು ಇನ್ನಷ್ಟು ಕುಸಿಯುವಂತೆ ಮಾಡಿದೆ. ಅಲೆಮಾರಿಗಳಾದ್ದರಿಂದ ರೇಶನ್ ಕಾರ್ಡ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಹಾಗಾಗಿ ಉಚಿತ ವೈದ್ಯಕೀಯ ಸೌಕರ್ಯ ದೊರೆಯದೆ, ಹಣ ಹೊಂದಿಸಲು ಸಾಧ್ಯಾವಾಗದೆ ಕೈ ಸೋತು ಹೋಗಿವೆ ಅಂತಾರೆ ಮಗುವಿನ ತಂದೆ ಮುದ್ದಪ್ಪ.
ಏನಾದರೊಂದು ಗುರುತಿನ ಚೀಟಿ ಇದ್ದರೂ ಸೌಲಭ್ಯ ಸಿಗಲು ಕಷ್ಟ ಪಡುವ ಹೊತ್ತಿನಲ್ಲಿ ಯಾವುದೇ ಗುರುತು ಪತ್ರ ಹೊಂದಿಲ್ಲದ ಕಾರಣ ಸರ್ಕಾರದ ಬಹು ಮುಖ್ಯಯೋಜನೆ ವಾಜಪೇಯಿ ಆರೋಗ್ಯಶ್ರೀ ಯೋಜನೆಯಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ. ಹೊಟ್ಟೆಗೆ ಬೇಕಾಗುವ ಹಿಟ್ಟಿಗಾಗಿ ಪ್ರತಿಕ್ಷಣದ ಅತಂಕ ಎದುರಿಸುವ ಹಂತದಲ್ಲಿರುವ ಈ ದಂಪತಿಗಳಿಗೆ ಸುಮಾರು 1 ಲಕ್ಷ ಖರ್ಚು ಮಾಡಿ ತಮ್ಮ ಮಗನಿಗೆ ಚಿಕಿತ್ಸೆ ಕೊಡಿಸುವುದು ಕನಸಿನ ಮಾತಾಗಿದ್ದು ಯಾರಾದರೂ ದಾನಿಗಳು ಅಥವಾ ಸಂಘಸಂಸ್ಥೆಗಳು ಮುಂದೆ ಬಂದು ಚಿಕಿತ್ಸೆ ವೆಚ್ಚ ಭರಿಸಬೇಕಾಗಿದೆ.
ವೈದ್ಯರೇ ನಿಗದಿ ಪಡಿಸಿದಂತೆ ಇನ್ನೂ ಹದಿನೈದು ದಿನಗಳಲ್ಲಿ ಮಗುವಿಗೆ ಚಿಕಿತ್ಸೆ ನೀಡದಿದ್ದರೆ ಪ್ರಾಣಕ್ಕೆ ಅಪಾಯ. ಇದನ್ನು ಕೇಳುತ್ತಿದ್ದಂತೆ ದಂಪತಿಗಳಿಗೆ ಆಕಾಶವೇ ಕಳಚಿಬಿದ್ದಂತಾಗಿದೆ. ಸಮಾಜ ಸೇವೆಯ ಹೆಸರಿನಲ್ಲಿ ಹುಟ್ಟುಹಬ್ಬದ ಕಟೌಟ್‌ಗಳನ್ನು ನಿರ್ಮಿಸಿ ಲಕ್ಷಾಂತರ ಖರ್ಚು ಮಾಡಿ ಪುಕ್ಕಟೆ ಪೋಜು ಕೊಡುವ ಪುಡಿರಾಜಕಾರಣಿಗಳು ಇಂತಹ ಕಾಯಿಲೆಯ ಮಗುವಿನ ಆರೋಗ್ಯಕ್ಕೆ ತಗುಲುವ ವೆಚ್ಚ ಭರಿಸುವ ಮನಸ್ಸು ಮಾಡಲಿ ಸಂಘಸಂಸ್ಥೆಗಳು ಉದಾರ ದಾನಿ ಮಾಡಿ ಮಾನವೀಯತೆ ಮೆರೆಯಲಿ.
ಅಮಾನವೀಯವಾಗಿ ದೌರ್ಜನ್ಯಕ್ಕೊಳಗಾಗ ದೆಹಲಿಯ ಬೇಬಿ ಫಾಲಕ್ ಕತೆ ನಿಮಗೆಲ್ಲರಿಗೂ ಗೊತ್ತೇ ಇದೆ. ಸರ್ವ ರೀತಿಯ ಚಿಕಿತ್ಸೆ ದೊರಕಿಯೂ ಬೇಬಿ ಫಾಲಕ್ ಇನ್ನೂ ಜೀವನ್ಮರಣದ ನಡುವೆ ತುಯ್ದಾಡುತ್ತಿದೆ. ಕನಿಷ್ಠ ಈ ಮಗುವಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕಿದರೆ ಮಗು ಬದುಕುಳಿಯುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಜಗತ್ತಿನ ಅತ್ಯುತ್ತಮ ಕ್ರಿಯಾತ್ಮಕ 10 ಕಂಪನಿಗಳಲ್ಲಿ 2ನೇ ಸ್ಥಾನ ಪಡೆದಿರುವ ಮತ್ತು ಭಾರತದಲ್ಲಿ 1ನೇ ಸ್ಥಾನದಲ್ಲಿರುವ ಬೆಂಗಳೂರಿನ ನಾರಾಯಣ ಹೃದಯಾಲಯ ತಾನೇ ಮುಂದೆಬಂದು ಈ ಮಗುವಿನ ರಕ್ಷಣೆಗೆ ಮುಂದಾಗಬಾರದೇಕೆ?
ಇದೀಗ ಬಂದ ಸುದ್ದಿ : ಸುರಪುರದ ಶಾಸಕ ಮತ್ತು ಯಾದಗಿರಿ ಉಸ್ತುವಾರಿ ಸಚಿವ ರಾಜುಗೌಡ ಅವರು ಮಗುವಿನ ಶಸ್ತ್ರಚಿಕಿತ್ಸೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಹಾಗೆಯೆ, ಕೆಲ ಸಂಘಟನೆಗಳೂ ಮುಂದೆಬಂದಿವೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications