ಲಂಡನ್‌ನಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ತೀವ್ರ ಹಲ್ಲೆ

ಭಾರತೀಯ ವಿದ್ಯಾರ್ಥಿಯನ್ನು 26 ವರ್ಷದ ಪ್ರವೀಣ್ ರೆಡ್ಡಿ ಎಂದು ಗುರುತಿಸಲಾಗಿದೆ. ಆತನನ್ನು ನ್ಯೂಹ್ಯಾಮ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹನ್ನೊಂದು ಜನರನ್ನು ಪೊಲೀಸರು ಬಂಧಿಸಿದ್ದು, ಅವರ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ.
ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬರುತ್ತಿದ್ದಾಗ ಪ್ರವೀಣ್ ಮೇಲೆ ಹಲ್ಲೆ ಮಾಡಲಾಗಿದೆ. ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಬಂಧಿತರಲ್ಲಿ ನಾಲ್ವರನ್ನು ಕಸ್ಟಡಿಯಲ್ಲಿ ಇಡಲಾಗಿದ್ದು, ಏಳು ಜನರಿಗೆ ಜಾಮೀನು ನೀಡಲಾಗಿದೆ.
ಎಸ್ಎಂ ಕೃಷ್ಣ ಸಹಾಯಹಸ್ತ : ಈ ಘಟನೆ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಭಾರತದ ರಾಯಭಾರಿ ರಾಜೇಶ್ ಪ್ರಸಾದ್ ಅವರೊಂದಿಗೆ ಮಾತನಾಡಿದ್ದು, ಎಲ್ಲ ರೀತಿಯ ಸಹಾಯ ನೀಡುವಂತೆ ಆದೇಶಿಸಿದ್ದಾರೆ. ದಾಳಿಗೊಳಗಾಗಿರುವ ಪ್ರವೀಣ್ ಅವರ ತಂದೆ ಉದ್ಯಮಿ ಸುಧಾಕರ್ ರೆಡ್ಡಿ ಅವರಿಗೆ ಲಂಡನ್‌ಗೆ ತೆರಳಲು ಕೂಡಲೆ ವೀಸಾ ದೊರಕಿಸಿಕೊಡುವುದಾಗಿಯೂ ಕೃಷ್ಣ ಭರವಸೆ ನೀಡಿದ್ದಾರೆ.












Click it and Unblock the Notifications