ನನ್ನ ರಾಜೀನಾಮೆಯಿಂದ ಗೌಡರು ನಿರಾಳ: ಯಡಿಯೂರಪ್ಪ

ದೇವೇಗೌಡ ನಿರಾಳ, ನಿರಾಳ: ಈ ಸಂದರ್ಭದಲ್ಲಿ ಮಾನಾಡಿದ ಯಡಿಯೂರಪ್ಪ, 'ನನ್ನ ಜನಪರ ಆಡಳಿತ ಸಹಿಸದ ಪ್ರತಿಪಕ್ಷಗಳು ನನ್ನ ವಿರುದ್ಧ ಪಿತೂರಿ ನಡೆಸಿತ್ತು. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ನನ್ನ ರಾಜೀನಾಮೆ ಅನಿವಾರ್ಯವಾಗಿತ್ತು' ಎಂದರು. ನಂತರ ಸ್ವಯಂಪ್ರೇರಿತರಾಗಿ 'ನನ್ನ ರಾಜೀನಾಮೆಯ ನಂತರ ದೇವೇಗೌಡರು ನಿರಾಳವಾಗಿದ್ದಾರೆ' ಎಂದೂ ಹೇಳಿದರು.
ಬೆಂಗಳೂರಿನಿಂದ ರೈಲು ಮೂಲಕ ಆಗಮಿಸಿದ ಯಡಿಯೂರಪ್ಪಗೆ ಅಬಕಾರಿ ಸಚಿವ ರೇಣುಕಾಚಾರ್ಯ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕರಾದ ಎಚ್ಎಂ ವಿಶ್ವನಾಥ, ಸುರೇಶ್ ಗೌಡ, ಲಕ್ಷ್ಮೀನಾರಾಯಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ ನಾಗರಾಜ ಶೆಟ್ಟಿ ಸಾಥ್ ನೀಡಿದರು.
ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ ಕಾರಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ತೆರಳಿದ ತಂಡ ಅಲ್ಲಿ ವಿಶೇಷ ಪೂಜೆ ಸಲ್ಲಿಸಿತು. ಬಳಿಕ ಅವರು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿದರು. ಈ ವೇಳೆ ಜರಗುತ್ತಿದ್ದ ಶಿರಾಡಿ ದೈವದ ಕೋಲ ವೀಕ್ಷಿಸಿದ ಯಡಿಯೂರಪ್ಪ ಅಭಯ ಪ್ರಸಾದ ಪಡೆದರು. ನಂತರ ಜೀರ್ಣೋದ್ಧಾರಗೊಳ್ಳುತ್ತಿರುವ ಕೇರ್ಪಡ ಶ್ರೀ ದುರ್ಗಾಪರಮೇಶ್ವರಿ ಮಹಿಷ ಮರ್ದಿನಿ ದೇವಳಕ್ಕೆ ಭೇಟಿ ನೀಡಿದರು.
ಇನ್ನು ಅಬಕಾರಿ ಸಚಿವ ರೇಣುಕಾಚಾರ್ಯ ಅವರು, 'ಸವದಿ ಸದನದಲ್ಲಿ ಮೊಬೈಲ್ ವೀಕ್ಷಿಸಿದ ಘಟನೆಯ ಬಗ್ಗೆ ವಿಪಕ್ಷಗಳು ಸಂಭ್ರಮಿಸುವ ಅಗತ್ಯವಿಲ್ಲ. ವಿಪಕ್ಷಗಳೂ ಕೂಡಾ ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರು ಯಾರು ಎಷ್ಟೆಷ್ಟು ಮದುವೆಯಾಗಿದ್ದಾರೆ ಎನ್ನುವುದೂ ತನಿಖೆಯಾಗಲಿ' ಎಂದು ಆಶಿಸಿದರು.












Click it and Unblock the Notifications