ಬ್ಲೂಫಿಲಂ ನೋಡುವುದು ತಪ್ಪಲ್ಲ - IPC 292 A

IPC section 292

ಬೆಂಗಳೂರು, ಫೆ.8: ಅಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಜಿಜೆಪಿ ಮಂತ್ರಿಗಳಾದ ಲಕ್ಷ್ಮಣ ಸವದಿ, ಸಿಸಿ ಪಾಟೀಲ್ ಹಾಗೂ ಕೃಷ್ಣ ಪಾಲೇಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾನೂನಿನ ಪ್ರಕಾರ ಬ್ಲೂ ಫಿಲ್ಮಂ ವೀಕ್ಷಣೆ ತಪ್ಪಲ್ಲ. ಆದರೆ, ನಿಯಮಗಳ ಪ್ರಕಾರ ಅಶ್ಲೀಲ ಸರಕುಗಳನ್ನು ನಿರ್ಮಿಸುವುದು ಮತ್ತು ಹಂಚುವುದು ಅಪರಾಧ. ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ.

ಹೀಗಾಗಿ, ಅಶ್ಲೀಲ ದೃಶ್ಯ ರವಾನೆ ಮಾಡಿದ ತಪ್ಪಿಗೆ ಮಾಜಿ ಸಚಿವ ಶ್ರೀಕೃಷ್ಣ ಪಾಲೇಮಾರ್ ಅವರ ಮೇಲೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳುವ ಅವಕಾಶಗಳಿದೆ.

ಐಪಿಸಿ ಸೆಕ್ಷನ್ 292 ವಿಭಾಗ 10 ಹಾಗೂ ರಾಜ್ಯದ ಚಲನಚಿತ್ರ ಪ್ರದರ್ಶನ ನಿಯಮಾವಳಿ ಕಾಯ್ದೆ ಪ್ರಕಾರ ಮಾಜಿ ಸಚಿವರುಗಳ ಮೇಲೆ ತನಿಖೆ ನಡೆಸಬಹುದಾಗಿದೆ.

ಆರೋಪ ಸಾಬಿತಾದರೆ ಮೊದಲ ಹಂತದಲ್ಲಿ 2 ವರ್ಷ ಶಿಕ್ಷೆ ಹಾಗೂ 2 ಸಾವಿರ ದಂಡ ವಿಧಿಸಲಾಗುತ್ತದೆ. ಆದರೆ, ಬ್ಲೂ ಫಿಲ್ಮಂ ವೀಕ್ಷಣೆ ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

V. Sundarrajan Vs State of Madras (Cri.P.C. No. 376 of 1978) ಪ್ರಕರಣ ಕೂಡಾ ಸೆಕ್ಷನ್ 292 A ಅಡಿಯಲ್ಲಿ ವಿಚಾರಣೆಗೆ ಒಳಪಟ್ಟಿತ್ತು. ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಐಪಿಸಿ ಸೆಕ್ಷನ್ 292 ರ ವಿವರಣೆ ನೀಡಿ,

'ಬ್ಲೂ ಫಿಲ್ಮಂ ಇಟ್ಟುಕೊಳ್ಳುವುದು, ವೀಕ್ಷಿಸುವುದು ಅಪರಾಧವಲ್ಲ(ಆದರೆ ಸಾರ್ವಜನಿಕ ಸ್ಥಳದಲ್ಲಿ ನೋಡುವಂತಿಲ್ಲ) ಆದರೆ, ನೀಲಿ ಚಿತ್ರಗಳನ್ನು ಮತ್ತೊಬ್ಬರಿಗೆ ಹಂಚಿದರೆ (ಮೊಬೈಲ್, ಸಿಡಿ ಮೂಲಕ) ಮಾತ್ರ ಶಿಕ್ಷಾರ್ಹವಾಗುತ್ತದೆ.

ಅಲ್ಲದೆ, ಬ್ಲೂ ಫಿಲ್ಮಂಗಳನ್ನು ಮಾರಾಟ ಮಾಡುವುದು, ಸಾರ್ವಜನಿಕವಾಗಿ ಪ್ರದರ್ಶಿಸುವುದು ಕೂಡಾ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಬಾಂಬೆ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+