ಎಸ್ ಪಿ ಜೊತೆ ಮೈತ್ರಿ ತಳ್ಳಿಹಾಕಿದ ರಾಹುಲ್ ಗಾಂಧಿ

ಉತ್ತರ ಪ್ರದೇಶ ಚುನಾವಣೆಯ ನಂತರ ಎಸ್ಪಿ ಅಥವಾ ಇನ್ನಾವುದೇ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಪ್ರಚಾರನಿರತರಾಗಿರುವ ರಾಹುಲ್, ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್‌ಗೆ ಉತ್ತರಪ್ರದೇಶ ಮುಖ್ಯಮಂತ್ರಿಯ ಪಟ್ಟ ದೊರೆಯುತ್ತದೆ. ನಮಗೆ ಯಾವ ಪಕ್ಷದ ಮೈತ್ರಿಯೂ ಬೇಡ. ನಮ್ಮ ಪಕ್ಷವು ಜನತೆಯ ಜೊತೆಗೆ ಮಾತ್ರ ಮೈತ್ರಿ ಮಾಡಿಕೊಂಡಿದೆ ಎಂದಿದ್ದಾರೆ.
"ನೀವು ನನ್ನ ತಾತನಲ್ಲಿ ನಂಬಿಕೆಯಿಟ್ಟಿದ್ದೀರಿ...ನನ್ನ ತಂದೆಯಲ್ಲೂ ನಂಬಿಕೆಯಿಟ್ಟಿದ್ದೀರಿ... ಈಗ ನೀವು ನನ್ನನ್ನು ನಂಬಿ"ಎಂದು ರಾಹುಲ್ ನೆರೆದಿದ್ದ ಭಾರೀ ಜನಸ್ತೋಮದ ಮುಂದೆ ಮತ ಯಾಚನೆ ಮಾಡಿದರು.
403 ಸದಸ್ಯ ಬಲದ ಉತ್ತರಪ್ರದೇಶ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ರಾಹುಲ್ ಕಾಂಗ್ರೆಸ್‌ನ ಪ್ರಚಾರದ ನೇತೃತ್ವ ವಹಿಸಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್ ಪಿ ಗಿಂತ ಎಸ್ ಪಿಗೆ ಈ ಭಾರಿ ಹೆಚ್ಚಿನ ಲಾಭವಾಗುವ ನಿರೀಕ್ಷೆ ಹೊಂದಲಾಗಿದೆ.












Click it and Unblock the Notifications