'ಯಾನಗುಂದಿ ಮಾಣಿಕೇಶ್ವರಿ ಕೃಪೆಯಿಂದ ಮತ್ತೆ ಸಿಎಂ ಆಗುವೆ'

ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಯಡಿಯೂರಪ್ಪ ನಿನ್ನೆಯಷ್ಟೇ ನವದೆಹಲಿಯಿಂದ ಬರಿಗೈ ದಾಸನಾಗಿ ವಾಪಸಾಗಿದ್ದರು. ಅಲ್ಲಿಂದ ನೇರವಾಗಿ ಗುಲ್ಬರ್ಗಾಕ್ಕೆ ಬಂದಿದ್ದರು. ರಾಜ್ಯ ಡಿಜಿಪಿ ಶಂಕರ್ ಬಿದರಿ ಅವರಿಗೆ ಸಾಥ್ ನೀಡಿದ್ದರು. ಮಾಣಿಕೇಶ್ವರಿಯ ಪರಮಭಕ್ತರಾದ ಶಂಕರ್ ಬಿದರಿ ಅವರ ಸಲಹೆಯ ಮೇರೆಗೆ ಯಡಿಯೂರಪ್ಪ ದೇವಿ ದರ್ಶನಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಯಡಿಯೂರಪ್ಪ ಅಭಿಮಾನಿಗಳು ಬೆಟ್ಟಕ್ಕೆ ಬಂದಿದ್ದರು.
ಮಾಣಿಕೇಶ್ವರಿ ದೇವಿಯ ಆಶೀರ್ವಾದಕ್ಕಾಗಿಯೇ ಜಿಲ್ಲೆಗೆ ಆಗಮಿಸಿದ್ದ ಯಡಿಯೂರಪ್ಪ ಅವರು ಭಾನುವಾರ ಬೆಳಗ್ಗೆ 7 ಗಂಟೆಗೆ ಬೆಟ್ಟ ತಲುಪಿ, ದೇವಿಯ ದರುಶನಕ್ಕೆ ಕಾದು ನಿಂತರು. ಸರಿಯಾಗಿ 11 ಗಂಟೆ ವೇಳೆಗೆ ಅವರಿಗೆ ದೇವಿ ದರುಶನ ಪ್ರಾಪ್ತಿಯಾಯಿತು. ಆಗ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇವಿಯ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದ ಬಿಎಸ್ ವೈ, ದೇವಿ ಆಶೀರ್ವಾದಿಂದ ನನಗೆ ಹೊಸ ಹುರುಪು, ಶಕ್ತಿ ಬಂದಿದೆ. ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವೆ' ಎಂದು ಹೇಳಿದರು. ಇದೇ ವೇಳೆ 'ದುಷ್ಟ ಬುದ್ಧಿಯ ಬಿಡು. ಗೋಹತ್ಯೆ, ಪ್ರಾಣಿ ಬಲಿಯನ್ನು ನಿಲ್ಲಿಸು' ಎಂದು ದೇವಿ ತನಗೆ ಸೂಚಿಸಿರುವುದಾಗಿ ಯಡಿಯೂರಪ್ಪ ತಿಳಿಸಿದರು.
ವಿಳಾಸ: Sri Sri Sri RupaRahita Ahimsa Yogeshwar Veer Dharmaja Mata Trust,
Suryanandi (Manik Giri), Yangundi Pin 585214, Sedam Tal , Gulbarga Dist
Tel: 08506-280028












Click it and Unblock the Notifications