ಮುಖ್ಯಮಂತ್ರಿ ಎದುರು ಗೊಳೋ ಎಂದ ಐಎಎಸ್ ಲಾಬಿ

ಸಿಬಿಐ ದಾಳಿ ಬಿಸಿಗೆ ಬಂಡಾಯದ ಬಿಸಿತಾಕಿಸಲು ನಿರ್ಧರಿಸಿರುವ ಆಂಧ್ರದ 50ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರನ್ನು ಶುಕ್ರವಾರ ಭೇಟಿ ಮಾಡಿ ಗೊಳೋ ಎಂದಿದ್ದಾರೆ. ಸಿಬಿಐ, ರಾಜ್ಯ ಸರಕಾರ ಕೈಗೆತ್ತಿಕೊಂಡಿರುವ ಹಲವಾರು ಯೋಜನೆಗಳ ಹಿಂದೆ ಬಿದ್ದಿದೆ. ಆದ್ದರಿಂದ ಅಂತಹ ಯೋಜನೆಗಳನ್ನು ಕೈಬಿಡಿ. ಇಲ್ಲವೇ ಮತ್ತೊಮ್ಮೆ ಅಧಿಕೃತವಾಗಿ ಸರಕಾರವೇ ಸ್ಪಷ್ಟೀಕರಣ ನೀಡಲಿ' ಎಂದು ಅಲವತ್ತುಕೊಂಡಿದ್ದಾರೆ.
'ಅಧಿಕಾರಾರೂಢ ಜನಪ್ರತಿನಿಧಿಗಳು ತಮ್ಮನ್ನು ಕೈಬಿಡುತ್ತಿದ್ದಾರೆ. ನಮ್ಮನ್ನು ಬಲಿಪಶುಗಳನ್ನಾಗಿಸುತ್ತಿದ್ದಾರೆ. ನಮಗೆ ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಸಿಬಿಐ ಬಂಧನದ ಭೀತಿಯಲ್ಲಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿದೆ. ನಮಗೆ ಮುಕ್ತ ವಾತಾವರಣ ಕಲ್ಪಿಸಿ' ಎಂದು ನೇರವಾಗಿ ಸಿಎಂ ಕಿರಣ್ ಕುಮಾರ್ ಅವರ ಬಳಿ ಈ ಐಎಎಸ್ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬಿಐ ತನಿಖೆಗೊಳಗಾಗಿರುವ ಇಂತಹ ಯೋಜನೆಗಳ ಲಾಭವನ್ನು ಅಧಿಕಾರಸ್ಥ ರಾಜಕಾರಣಿಗಳು ಪಡೆಯುತ್ತಿದ್ದಾರೆ. ನಾವು ಸುಮ್ಮನೆ ಪೇಪರ್ ವರ್ಕ್ ಮಾಡಿದ್ದಕ್ಕೆ ಸಿಬಿಐ ದಾಳಿಯ ಶಿಕ್ಷೆಗೆ ಗುರಿಯಾಗುತ್ತಿದ್ದೇವೆ. ಇದು ತಕ್ಷಣ ನಿಲ್ಲಬೇಕು ಎಂದು ಐಎಎಸ್ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಮಾಹಾಪಾತ್ರೊ ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications