ಅಡುಗೆ ಮಾಡದಿದ್ದರೆ ಸಾವು ಖಚಿತ, ಗಾರ್ಡ್ ಅನಂತ್

ಕೊಲೆಯಾದ ಸೆಕ್ಯೂರಿಟಿ ಗಾರ್ಡ್ ಅನಂತ್ ಕುಮಾರ್ ಜೀನಾ(25) ಮೂಲತಃ ಒಡಿಶಾ ಮೂಲದವನು. ತನ್ನ ರಾಜ್ಯದವರಾದ ಸುಭಾಷ್,ಸುರಿಕ್, ಜಯಕೃಷ್ಣ, ಫರಿದಾ, ಫಯಾಜ್ ಎಂಬುವರ ಜೊತೆ ವಿಲ್ಸನ್ ಗಾರ್ಡನ್ ನ ವಿನಾಯಕ ನಗರದಲ್ಲಿ ರೂಮ್ ಮಾಡಿಕೊಂಡಿದ್ದನು.
ಘಟನೆ ವಿವರ: ಆರು ಜನರು ಬನ್ನೇರುಘಟ್ಟ ರಸ್ತೆ ಬಳಿಯ ಶೋಭಾ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು, ಕಳೆದ ಎರಡು ತಿಂಗಳ ಹಿಂದೆ ಅನಂತ್ ಕುಮಾರ್ ಬೇರೆಡೆ ಕೆಲಸಕ್ಕೆ ಸೇರಿದ್ದ. ರಾತ್ರಿ ಕೆಲಸ ಮುಗಿಸಿ ರೂಮ್ ಗೆ ಬಂದ ಅನಂತ್ ಅಡುಗೆ ಮಾಡದೇ ಹಾಗೆ ಮಲಗಿ ಬಿಟ್ಟ.
ಅಡುಗೆ ವಿಷಯಕ್ಕಾಗಿ ಅನಂತ್ ಹಾಗೂ ಸುಭಾಷ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸುಭಾಷ್ ಗೆ ಇತರೆ ರೂಮ್ ಮೇಟ್ ಗಳು ಸಾಥ್ ನೀಡಿದ್ದಾರೆ.
ಅನಂತ್ ಮೇಲೆ ಎಲ್ಲರೂ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಇವರ ರೂಮ್ ನಲ್ಲಿ ನಡೆದ ಗಲಾಟೆಯಿಂದ ಎಚ್ಚೆತ್ತ ಮೇಲಿನ ಮನೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಂತ್ ನನ್ನು ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಾರ್ಗ ಮಧ್ಯದಲ್ಲೇ ಅನಂತ್ ಮೃತಪಟ್ಟಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.












Click it and Unblock the Notifications