ತಿಹಾರ ಜೈಲಿನ ಏಕ್ ಸಾಲ್ ಕಾ ರಾಜಾ
ನವದೆಹಲಿ,
ಫೆ.2: ತಿಹಾರ ಜೈಲು ಅಂದರೇನೇ ಕುಖ್ಯಾತ. ಅಂತಹುದರಲ್ಲಿ ಅಲ್ಲಿ ಏಕ್ ಸಾಲ್ ಕಾ ರಾಜಾ ಆಗಿರುವ ಮಾಜಿ ಕೇಂದ್ರ ಸಚಿವ ಎ. ರಾಜಾ ಜೈಲುಪಾಲಾಗಿ ನಿನ್ನೆಗೆ ಫೆ. 1ಕ್ಕೆ ಸರಿಯಾಗಿ ಸಾಲ್ ಗಿರಾ ಆಗಿದೆ. ಆದರೆ ಅವರು ಇನ್ನೂ ಇಂತಹ ಸಾಲ್ ಗಿರಾ ಗಳನ್ನು ಆಚರಿಸಿಕೊಳ್ಳುವ ಲಕ್ಷಣಗಳು ಹೆಚ್ಚಾಗಿವೆ. id="toptextpromo">ಸ್ವಾತಂತ್ರ್ಯೋತ್ತರ
ಭಾರತದಲ್ಲಿ ಘಟಿಸಿರುವ ಅತಿ ದೊಡ್ಡ ಹಗರಣದ ಸರದಾರ ಈ ರಾಜಾ ಎಂದು ಬಿಂಬಿತರಾಗಿದ್ದಾರೆ. ಆದರೆ ಡಿಎಂಕೆಯ ಬಹುಮುಖ ಪ್ರತಿಭೆ ಕನ್ನಿಮೋಳಿ ಸಹ ಪ್ರಕರಣದ ಪ್ರಮುಖ ಪಾತ್ರಧಾರಿ ಎನ್ನಲಾಗಿದೆಯಾದರೂ ಆರೇ ತಿಂಗಳಿಗೆ ತಿಹಾರ ಜೈಲುವಾಸ ಮುಗಿಸಿಕೊಂಡು ಜಾಮೀನಿನ ಮೇಲೆ ಮನೆ ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಗಮನಾರ್ಹ. ಆದರೆ ಈ ಪುಣ್ಯಾತ್ಮ ರಾಜಾ ಇದುವರೆಗೆ ಜಾಮೀನು ಬೇಡಿ ಅರ್ಜಿ ಸಲ್ಲಿಸದಿರುವುದು ಆಶ್ಚರ್ಯ ಮತ್ತು ಹಲವು ಸಂಶಯಗಳಿಗೆ ಕಾರಣವಾಗಿದೆ. id='are-slot-1' class='oiad oi-axt oiadv'> id='top-searched-articles'>ಗಮನಾರ್ಹವೆಂದರೆ
ರಾಜಾ ಜೈಲಿನಲ್ಲಿ ಎಲ್ಲ ವಿಶೇಷ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ. ಅದು ಮೊಬೈಲ್ ಆದರೂ ಆಗಿರಬಹದು ಅಥವಾ ದಿನನಿತ್ಯ ಪುಷ್ಕಳ ಆಹಾರವಾದರೂ ಆಗಿರಬಹುದು. ಇನ್ನು ಡಿಎಂಕೆ ಪಕ್ಷವು ತನ್ನ ರಾಜಾನಿಗೆ ಅಖಂಡ ನಿಷ್ಠೆ ತೋರಿದೆ. ಮಾಜಿ ಕೇಂದ್ರ ಸಚಿವ ಟಿಆರ್ ಬಾಲು ಆಗಾಗ್ಗೆ ರಾಜಾನನ್ನು ಭೇಟಿ ಮಾಡುತ್ತಾ, ಪಕ್ಷದ ಸಂಪರ್ಕ ಕೊಂಡಿಯಾಗಿದ್ದಾರೆ.











Click it and Unblock the Notifications