ಬೆಂಗಳೂರಿನಲ್ಲಿ ಪಂಡಿತ್ ರವಿಶಂಕರ್ ಕೊನೆ ಕಚೇರಿ

Pandit Ravi Shankar
ಬೆಂಗಳೂರು, ಜ.31: ವಾರಣಾಸಿಯ ಸಂಗೀತ ಸಾಮ್ರಾಟ ಪಂಡಿತ್ ರವಿ ಶಂಕರ್ ಅವರ ಕಟ್ಟ ಕಡೆಯ ಸಂಗೀತ ಕಚೇರಿ ಕೇಳುವ ಅವಕಾಶ 'ಸಂಗೀತ ನಗರಿ' ಬೆಂಗಳೂರಿಗೆ ಸಿಕ್ಕಿದೆ.

91 ವರ್ಷ ವಯಸ್ಸಿನ ಸಿತಾರ್ ವಾದಕ ಫೆ.7ರಂದು ನಗರ ಸಂಗೀಯ ಪ್ರೇಮಿಗಳ ಮನತಣಿಸಲಿದ್ದಾರೆ. ಅನಾಥ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಿಸುತ್ತಿರುವ ಪ್ರೇಮಾಂಜಲಿ ಶಿಕ್ಷಣ ಟ್ರಸ್ಟ್ 'ಫೇರ್ ವೆಲ್ ಟು ಬೆಂಗಳೂರು' ಎಂಬ ಕಾರ್ಯಕ್ರಮ ಆಯೋಜಿಸಿದೆ.

ಅರಮನೆ ಮೈದಾನದಲ್ಲಿ ಪುತ್ರಿ ಅನೌಷ್ಕ ಶಂಕರ್ ಜೊತೆ ರವಿ ಶಂಕರ್ ಅವರು ಹಿಂದೂಸ್ತಾನಿ ರಾಗಗಳಿಗೆ ತಂತಿ ವಾದ್ಯ ಮೀಟುವುದನ್ನು ನೋಡುವ ಭಾಗ್ಯ ಬೆಂಗಳೂರಿಗರಿಗೆ ಸಿಕ್ಕಿದೆ.

ಪ್ರೇಮಾಂಜಲಿ ಟ್ರಸ್ಟ್ ಬಗ್ಗೆ: ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಜಧಾನಿಯಾಗಿ ಬೆಂಗಳೂರು ರೂಪುಗೊಳ್ಳುತ್ತಿದೆ. ಕಳದ 6 ವರ್ಷಗಳಿಂದ ಸಂಗೀತ ಹಬ್ಬವನ್ನು ಆಯೋಜಿಸುತ್ತಿದ್ದೇವೆ.

ಕಳೆದ ವರ್ಷ ಭೀಮಸೇನ್ ಜೋಶಿ ಹಾಗೂ ಬಾಲಮುರಳಿ ಕೃಷ್ಣ ಅವರ ಜುಗಲ್ ಬಂದಿ ಕಾರ್ಯಕ್ರಮ ಭರ್ಜರಿ ಯಶಸ್ಸು ನೀಡಿತ್ತು. ಫೆ.7ರಂದು ಸಂಗೀತ ಸ್ವರ್ಗವೇ ಧರೆಗಿಳಿದ್ದಂತೆ ಸಂಗೀತ ಪ್ರೇಮಿಗಳಿಗೆ ಅನ್ನಿಸಲಿದೆ ಎಂದು ಪ್ರೇಮಾಂಜಲಿ ಟ್ರಸ್ಟ್ ಮುಖ್ಯಸ್ಥ ಬಾಲಕೃಷ್ಣ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

2002ರಲ್ಲಿ ದೇವಿ ಮಹಾತ್ಮೆ ಸಾರುವ ಮಲ್ಲಿಕಾ ಸಾರಾಭಾಯಿ ಅವರ ನೃತ್ಯದೊಂದಿಗೆ ಆರಂಭವಾದ ಸಾಂಸ್ಕೃತಿಕ ಅಭಿಯಾನ ಇಂದಿನವರೆಗೂ ಯಶಸ್ಸಿನಿಂದ ನಡೆದುಕೊಂಡು ಬಂದಿದೆ ಎಂದು ಬಾಲಕೃಷ್ಣ ಹೆಗ್ಡೆ ಸ್ಮರಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+