ನಿಲೇಕಣಿ ಆಧಾರ್ ನೋಂದಣಿ ಸ್ಥಗಿತ?

ನಂದನ್ ನಿಲೇಕಣಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ಸಿಂಗ್ ಅಹ್ಲುವಾಲಿಯಾ ನಡುವೆ ಜಟಾಪಟಿ ತಿಳಿಗೊಂಡು ಆಧಾರ್ ಗೆ ಕೇಂದ್ರದ ಒಪ್ಪಿಗೆ ಸಿಕ್ಕಿತು ಎನ್ನುವಷ್ಟರಲ್ಲಿ ಇನ್ನೊಂದು ಸಮಸ್ಯೆ ಎದುರಾಗಿದೆ.
ಆಧಾರ್ ಯೋಜನೆ ಫೆ.15ರಿಂದ ಸ್ಥಗಿತಗೊಳ್ಳಲಿದೆ. ರಾಜ್ಯದ 23 ಜಿಲ್ಲೆಗಳ ಸುಮಾರು 2245 ಖಾಸಗಿ ಸಂಸ್ಥೆಗಳ ಗುತ್ತಿಗೆ ಅವಧಿ ಫೆ.15ಕ್ಕೆ ಮುಗಿಯಲಿದೆ. ಸರ್ಕಾರ ಇನ್ನೂ ಆಧಾರ್ ನೋಂದಣಿ, ಸುರಕ್ಷತೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಿವಲ್ಲಿ ವಿಫಲವಾಗಿರುವ ಕಾರಣ, ನೋಂದಣಿ ಕಾರ್ಯ ಸ್ಥಗಿತಗೊಳಿಸಲಾಗುತ್ತಿದೆ. ಇದು ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಅನ್ವಯಿಸಲಿದೆ.
ನೋಂದಣಿ ಸಂಖ್ಯೆ 1.4ಕೋಟಿ ತಲುಪಿದ ಮೇಲೆ ನೋಂದಣಿ ಕಾರ್ಯ ಸ್ಥಗಿತಗೊಳಿಸುವಂತೆ ಸರ್ಕಾರ ಮುಂಚಿತವಾಗಿ ಸೂಚಿಸಿತ್ತು. ರಾಜ್ಯದಲ್ಲಿ ಸುಮಾರು 1.34 ಕೋಟಿ ನಾಗರಿಕರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗಿದೆ ಎಂದು ಇ ಆಡಳಿತ ಸಿಇಒ ಡಿಎಸ್ ರವೀಂದ್ರನ್ ಹೇಳಿದ್ದಾರೆ.











Click it and Unblock the Notifications