ಯಡಿಯೂರಪ್ಪ ಕುಬುದ್ಧಿ ಸ್ಯಾಂಪಲ್ ಕೊಟ್ಟ ಎಚ್ಡಿಕೆ

ಬಾಗಲೂರಿನಲ್ಲಿ ಭಾನುವಾರ(ಜ.29) ನಡೆದ ಜೆಡಿಎಸ್ ಸಮಾವೇಶದಲ್ಲಿ ಕುಮಾರಸ್ವಾಮಿಗಳು ತಮ್ಮ ಭಾಷಣದುದ್ದಕ್ಕೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಭರ್ಜರಿ ಟೀಕಾಪ್ರಹಾರ ಮಾಡಿದರು.
'ಮುಂದಿನ ಬಜೆಟ್ ನಾನೇ ಮಂಡಿಸುತ್ತೇನೆ' ಎಂದು ಸಿಎಂ ಸದಾನಂದ ಗೌಡರು ಹೇಳಿಕೆ ನೀಡುವುದನ್ನು ಕೇಳಿದರೆ ನನಗೆ ಅವರ ಮೇಲೆ ಅನುಕಂಪ ಮೂಡುತ್ತದೆ. ಅವರಿಗೆ ಯಡಿಯೂರಪ್ಪ ಎಲ್ಲಿ ಸಿಎಂ ಸ್ಥಾನ ಕಿತ್ತುಕೊಳ್ಳುತ್ತಾರೆ ಎಂಬ ಭಯ ಕಾಡುತ್ತಿರಬೇಕು ಪಾಪ.
ಮೂರೂವರೆ ವರ್ಷ ಏನೂ ಕಿಸಿಯೋಕೆ ಆಗದ ಯಡಿಯೂರಪ್ಪ ಮತ್ತೆ ಸಿಎಂ ಆಗಿ ಬಡವರ ಉದ್ಧಾರ ಮಾಡುವ ಮಾತನಾಡುತ್ತಿರುವುದು ಅಸಹ್ಯ ಹುಟ್ಟಿಸುತ್ತಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಯಡ್ಡಿ ಕುಬುದ್ಧಿಗೆ ಒಂದು ಸ್ಯಾಂಪಲ್: 'ನಾನು ಅಕಸ್ಮಾತ್ ಆಗಿ ಮುಖ್ಯಮಂತ್ರಿಯಾದೆ ನಿಜ. ಆದರೆ, ಗ್ರಾಮ ವಾಸ್ತವ್ಯದ ಕಲ್ಪನೆ ಮೂಲಕ ಒಮ್ಮೆ ಮುಧೋಳದ ಗ್ರಾಮವೊಂದರಲ್ಲಿ ವಾಸವಾಗಿದ್ದೆ. ಆ ಗ್ರಾಮದ ದೇವದಾಸಿ ತಾಯಿಯೊಬ್ಬಳ ಮಗಳು ನನ್ನ ಕಾಲಿಗೆ ಬಿದ್ದು, ಅಣ್ಣಾ ನಾನು ಎಂಎ ಮಾಡಿದ್ದೇನೆ ನನ್ನ ಪತಿ ಮೇಲ್ಜಾತಿಯವರು ಇಲ್ಲಿ ನಮಗ ಕೆಲ್ಸ ಸಿಗೋಲ್ಲ. ನಮ್ಮ ಕಾಪಾಡಿ ಎಂದಳು.'
ತಕ್ಷಣ ನಾನು 25 ಸಾವಿರ ರು ಕೈಗಿತ್ತು. ನನ್ನ ಕಚೇರಿಯಲ್ಲಿ ದಂಪತಿಗಳಿಗೆ ಕೆಲ್ಸ ಕೊಡಿಸಿದೆ. ಇಬ್ಬರಿಗೂ ಗ್ರಾಮೀಣ ಭಾಗದ ಪ್ರತಿಭಾವಂತ ಅರ್ಜಿಗಳನ್ನು ಆಯ್ಕೆ ಮಾಡಿ ನನಗೆ(ಸಿಎಂ ಆಗಿದ್ದ ಕಾಲದಲ್ಲಿ) ನೀಡುವಂತೆ ವ್ಯವಸ್ಥೆ ಕಲ್ಪಿಸಿದ್ದೆ.
ಆದರೆ, ಈ ಪುಣ್ಯಾತ್ಮ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೊದಲ ದಿನವೇ ಆ ಹೆಣ್ಮಗಳನ್ನು ಕೆಲ್ಸದಿಂದ ಕಿತ್ತು ಹಾಕಿಬಿಟ್ಟ. ಈಗ ಆಕೆ ಹಾಗೂ ಆಕೆ ಪತಿ ಬೀದಿಗೆ ಬಿದ್ದಿದ್ದಾರೆ. ಇಂಥವರಿಂದ ಬಡವರ ಉದ್ಧಾರ ನಿರೀಕ್ಷೆ ಮಾಡಲು ಹೇಗೆ ಸಾಧ್ಯ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.












Click it and Unblock the Notifications