ಕನ್ನಡ ಎಲ್ಲರಿಗೂ ಕಡ್ಡಾಯವಾಗಲಿ: ಇನ್ಫಿ ಮೂರ್ತಿ

NR Narayana Murthy
ಬೆಂಗಳೂರು, ಜ.29: ಕನ್ನಡ ಕಲಿಕೆ ಎಲ್ಲರಿಗೂ ಕಡ್ಡಾಯ ಮಾಡುವುದು ಒಳ್ಳೆಯ ಕ್ರಮ. ಸ್ಥಳೀಯ ಭಾಷೆ ಅರಿವಿದ್ದರೆ ಇಲ್ಲಿನ ಜನರೊಡನೆ ಬೆರೆತು ಬೆಳೆಯಲು ಸಹಕಾರಿಯಾಗುತ್ತದೆ. ಉದ್ಯಮಿಗಳಿಗೆ ಇದೊಂದು ಪಾಠವಾಗಲಿ, ಸ್ಥಳೀಯ ಸಂಸ್ಕೃತಿ, ಜನಜೀವನದ ಅರಿವಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

ನಗರದಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಇನ್ಫಿ ಮೂರ್ತಿ, ಒಂದನೇ ತರಗತಿಯಿಂದ ಕನ್ನಡ ಕಲಿಕೆ ಕಡ್ಡಾಯಗೊಳಿಸಬೇಕು. ಅದು ಸಾಧ್ಯವಾಗದಿದ್ದರೆ ಮನೆಯಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದ ಕನ್ನಡ ಕಲಿಸಿದರೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾಗತೀಕರಣದ ಪ್ರಭಾವದ ಜಗತ್ತು ಇನ್ನಷ್ಟು ಚಿಕ್ಕದಾಗುತ್ತಿದೆ ನಿಜ. ಆದರೆ, ವೃತ್ತಿಪರರಿಗೆ ವ್ಯಕ್ತಿತ್ವ ವಿಕಸನಕ್ಕೆ ಸ್ಥಳೀಯ ಸಂಸ್ಕೃತಿಯ ಬಗ್ಗೆ ಅರಿವಿದ್ದರೆ ಹೆಚ್ಚು ಲಾಭವಾಗುತ್ತದೆ. ವಿಶ್ವದಾದ್ಯಂತ ಪ್ರವಾಸ ಮಾಡಿದ ಮೇಲೆ ನನಗನ್ನಿಸಿದ್ದು, ನಾವು ಕಲಿಯುವುದು ಬಹಳಷ್ಟಿದೆ ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಬೇರೆ ಬೇರೆ ಸಂಸ್ಕೃತಿಯಲ್ಲಿ ಬೆಳೆದ ಜನರಾದರೂ ಒಂದೇ ದೃಷ್ಟಿಕೋನ, ಗುರಿ ಇರುವುದನ್ನು ಕಂಡಿದ್ದೇನೆ, ಅಭಿಪ್ರಾಯ ಮಂಡನೆಯಲ್ಲಿ ವ್ಯತ್ಯಾಸ ಕಂಡು ಬಂದರೂ ಮೂಲ ಆಶಯ ಒಂದೇ ಆಗಿರುತ್ತದೆ. ನಮ್ಮ ಮೂಲ ಸಂಸ್ಕೃತಿ ಉಳಿಸಿಕೊಂಡು ಇತರೆ ಸಂಸ್ಕೃತಿ ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಇನ್ಫಿ ಮೂರ್ತಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+