ಯಡ್ಡಿ ಗೆಲುವು ತಾತ್ಕಾಲಿಕ, ಅಸ್ಥಿರತೆ ಮುಂದುವರಿಕೆ

ಸೋಮವಾರಪೇಟೆಯಲ್ಲಿ ಕೊಡವ ಸಮಾಜ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾವೇಶದಲ್ಲಿ ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಜನಪ್ರತಿನಿಧಿಗಳು ದೇಶದ ಹಿತಕ್ಕೆ ಏನನ್ನೂ ಮಾಡುತ್ತಿಲ್ಲ. ಸ್ವಹಿತಕ್ಕೆ ಮಾಡಿಕೊಳ್ಳುತ್ತಿದ್ದಾರೆ. ಜನರಿಗೆ ರಾಜಕಾರಣಿಗಳ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದರು.
ರಾಜ್ಯದಲ್ಲಿ ಅಕಾಲಿಕವಾಗಿ ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟವಾಗಿ ಸ್ವಾಮೀಜಿಗಳು ಉತ್ತರಿಸದೆ, ಚುನಾವಣೆ ನಡೆದರೂ ನಡೆಯಬಹುದು ಎಂದರು.
ಯಡಿಯೂರಪ್ಪ ಅವರ ಜನಪ್ರಿಯತೆ,ಗೆಲುವು ತಾತ್ಕಾಲಿಕವಾದದ್ದು, ಬಿಜೆಪಿ ಸ್ಥಿರ ಸರ್ಕಾರ ನಡೆಸುವ ಕನಸು ನನಸಾಗಲು ಕಾಲ ಪಕ್ವವಾಗಿಲ್ಲ ಎಂದರು. ವಿಪಕ್ಷಗಳಿಗೂ ಗ್ರಹಗತಿ ಸರಿ ಇಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರಾಜಕೀಯ ಅಸ್ಥಿರತೆ ಮುಂದುವರೆಯುತ್ತದೆ ಎಂದು ಸ್ವಾಮೀಜಿಗಳು ಹೇಳಿದರು.












Click it and Unblock the Notifications