ಹತ್ತು ವರ್ಷದ ಬಾಲಕಿಯನ್ನು ನುಂಗಿದ ಮೊಸಳೆ

ಬಾಲಕಿ ತನ್ನ ತಂದೆ ಮತ್ತು ಸಹೋದರನೊಡನೆ ಕಳೆದ ಗುರುವಾರ ಮೀನು ಹಿಡಿಯಲೆಂದು ನದಿಗೆ ಹೋಗಿದ್ದಾಳೆ. ಅಪ್ಪ ಮೀನು ಹಿಡಿಯಲು ತಲ್ಲೀನನಾಗಿದ್ದ, ಸಹೋದರ ಅಲ್ಲೇ ಆಟವಾಡುತ್ತಿದ್ದ, ಆಮೆಗಾಗಿ ಕೈಚಾಚಿದ ನತದೃಷ್ಟ ಬಾಲಕಿಯನ್ನು ಮೊಸಳೆಯೊಂದು ಎಳೆದುಕೊಂಡಿದೆ.
ಅಪ್ಪ ಮತ್ತು ಸಹೋದರ ನಿಸ್ಸಹಾಯಕರಾಗಿ ನೋಡುವುದು ಬಿಟ್ಟು ಬೇರೇನೂ ಮಾಡಲಾಗಿಲ್ಲ. ಹಳ್ಳಿಯ ಜನರೆಲ್ಲ ಬಂದು ಕಳೆದ ಶನಿವಾರ ಕೊಳದಲ್ಲೆಲ್ಲಾ ಬಾಲಕಿಯ ದೇಹಕ್ಕಾಗಿ ಹುಡುಕಾಡಿದ್ದಾರೆ. ಆಕೆಯ ಬಟ್ಟೆಯ ತುಂಡುಗಳು ಮಾತ್ರ ದೊರೆತಿದ್ದು, ದೇಹದ ತುಣುಕು ಕೂಡ ದೊರೆತಿಲ್ಲ. ಕಳೆದ ತಿಂಗಳು ಕೂಡ ಇದೇ ನದಿಯಲ್ಲಿ ಬಾಲಕನೊಬ್ಬ ಮೊಸಳೆಗೆ ಆಹುತಿಯಾಗಿದ್ದ.
ರಂಗನತಿಟ್ಟಿನಲ್ಲಿಯೂ... : ಇದೇ ರೀತಿಯ ಘಟನೆ, ಹಲವಾರು ವರ್ಷಗಳ ಹಿಂದೆ ಮೈಸೂರಿನ ಬಳಿಯ ರಂಗನತಿಟ್ಟು ಪಕ್ಷಧಾಮದಲ್ಲಿಯೂ ನಡೆದಿತ್ತು. ಬೋಟಲ್ಲಿ ಕುಳಿತು ನೀರಿನಲ್ಲಿ ಕೈಹಾಕಿ ಆಟವಾಡುತ್ತಿದ್ದ ಬಾಲಕನನ್ನು ಮೊಸಳೆ ಎಳೆದುಕೊಂಡಿತ್ತು. ಬೋಟು ಅಲುಗಾಡಿ, ಎಲ್ಲರೂ ನೀರಲ್ಲಿ ಬೀಳುವ ಅಪಾಯ ಕಂಡಾಗ, ಅನಿವಾರ್ಯವಾಗಿ ಬಾಲಕನನ್ನೇ ನೀರಿಗೆ ಎಸೆಯಲಾಗಿತ್ತು.
ದಶಕಗಳ ಹಿಂದೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಮಾರಿಯಾ ಎಂಬ ಆರು ವರ್ಷದ ಪುಟ್ಟ ಬಾಲಕಿಯನ್ನು ಅವಳ ಅಜ್ಜ ನೋಡನೋಡುತ್ತಿದ್ದಂತೆಯೇ ನ್ಯಾಷನಲ್ ಪಾರ್ಕಿನ ಹಸಿದ ಹೆಬ್ಬುಲಿಯೊಂದು ಎಳೆದುಕೊಂಡು ತಿಂದುಹಾಕಿತ್ತು. ಇಂಥದೇ ಘಟನೆ ಮೈಸೂರಿನ ಜಯಚಾಮರಾಜೇಂದ್ರ ಮೃಗಾಯಲಯದಲ್ಲಿ ಕೂಡ ಸಂಭವಿಸಿ ಹುಲಿಗೆ ಮಗು ಆಹಾರವಾಗಿದ್ದ.












Click it and Unblock the Notifications