ಸಲ್ಮಾನ್ ರಶ್ದಿ ಮೇಲೆ ಕ್ರಿಮಿನಲ್ ಕೇಸ್, ಜೈಪುರ ಧಗಧಗ

ವಿಡಿಯೋ ಮೂಲಕ ಸಾಹಿತ್ಯ ಉತ್ಸವದಲ್ಲಿ ಕಾಣಿಸಿಕೊಳ್ಳುವುದಾಗಿ ಸಲ್ಮಾನ್ ರಶ್ದಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದ್ದಾರೆ.
ಭಾರತ ಮೂಲದ ರಶ್ದಿಗೆ ಭೂಗತ ಜಗತ್ತಿನಿಂದಲೂ ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ರಶ್ದಿ ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ರಾಜಸ್ಥಾನ ಸರ್ಕಾರ ರಶ್ದಿ ಅವರ ಆಸೆಗೆ ತಣ್ಣೀರೆರಚಿದೆ.
ವಿಡಿಯೋ ಮೂಲಕವಾಗಲಿ, ಪ್ರತ್ಯಕ್ಷವಾಗಲಿ ರಶ್ದಿ ಅವರ ಭಾಷಣ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿದೆ. 'ರಾಜಸ್ಥಾನ ಪೊಲೀಸರು ವಿನಾಕರಣ ಸಾಹಿತ್ಯೋತ್ಸವದಿಂದ ನನ್ನನ್ನು ದೂರ ಇರಿಸಲು ಯತ್ನಿಸಿದ್ದಾರೆ' ಎಂದು ರಶ್ದಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಇಸ್ಲಾಂ ಸಂಘಟನೆಗಳ ಆಕ್ರೋಶ: ಸತಾನಿಕ್ ವರ್ಸಸ್ ಎಂಬ ವಿವಾದಿತ ಕೃತಿಯ ಬಗ್ಗೆ ಇಸ್ಲಾಂ ಸಂಪ್ರಾದಾಯವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. 1988ರಲ್ಲಿ ರಶ್ದಿ ಬರೆದ ಈ ಕೃತ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಿಷೇಧಗೊಂಡಿತ್ತು. 1989ರಲ್ಲಿ ಇಸ್ಲಾಂ ಗುರು ಅಯಾತುಲ್ಲ ರುಹೊಲ್ಲ ಖೊಮೈನಿ ಅವರು ಫತ್ವಾ ಹೊರಡಿಸಿ, ರಶ್ದಿ ಸಾವನ್ನು ಬಯಸುತ್ತೇವೆ ಎಂದು ಧಾರ್ಮಿಕ ಕಟ್ಟಳೆ ಹೊರಡಿಸಿದ್ದರು.
ರಶ್ದಿ ಅವರ ಸತಾನಿಕ್ ವರ್ಸರ್ ಸಾಲುಗಳನ್ನು ಓದಿದ ನಾಲ್ವರು ಸಾಹಿತಿಗಳ ಮೇಲೂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪ್ರಕರಣ ಕೋರ್ಟ್ ಮೇಟ್ಟಿಲೇರಿದೆ.












Click it and Unblock the Notifications