ಫೆ.7ರ ತನಕ ಬಾಲಕೃಷ್ಣಗೌಡರಿಗೆ ಪೊಲೀಸ್ ಕಾಟವಿಲ್ಲ

ಆರಂಭದಲ್ಲಿ ವಿಚಾರಣೆಗೆ ಎಂಟು ವಾರಗಳ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ ನಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ತನಿಖೆಗೆ ಸಹಕರಿಸುವಂತೆ ಸೂಚಿಸಿತ್ತು. ಹೈಕೋರ್ಟ್ ತಡೆಯಾಜ್ಞೆಗೊಳಿಸಿದ ಕುರಿತು ಲೋಕಾಯುಕ್ತ ಎಡಿಜಿಪಿ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ಪ್ರಕರಣದ ತನಿಖೆ ಪೂರ್ಣಗೊಳಿಸಲು 20 ದಿನಗಳ ಅಗತ್ಯವಿದೆ ಎಂದು ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಾಧೀಶ ಎನ್. ಕೆ. ಸುದೀಂದ್ರರಾವ್ ಫೆ.7ಕ್ಕೆ ಮುಂದೂಡಿದರು.
ಭದ್ರಾವತಿಯ ವಿಎಸ್‌ಐಎಲ್‌ನ ನಿವೃತ್ತ ಎಂಜಿನಿಯರ್ ಎಸ್. ಎನ್. ಬಾಲಕೃಷ್ಣ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ಕೋರ್ಟ್ ತನಿಖೆಗೆ ಆದೇಶಿ ಸಿತ್ತು. ಈ ನಡುವೆ ತಮ್ಮ ವಿರುದ್ಧದ ದೂರನ್ನು ವಜಾಗೊಳಿಸುವಂತೆ ಎಚ್.ಡಿ ಬಾಲಕೃಷ್ಣ ಗೌಡ ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications