ಆಟೋ ಚಾಲಕನ ಪ್ರಾಮಾಣಿಕತೆಗೆ ಏನನ್ನುತ್ತೀರಿ?

auto-driver-returns-5-lakh-what-do-you-say
ಬೆಂಗಳೂರು, ಜ.20: ಸಾರಕ್ಕಿ ಆಟೋ ಚಾಲಕ ಪಾಂಡುರಂಗನೇನೋ ತನ್ನ ಪ್ರಯಾಣಿಕ ಮರೆತು ಬಿಟ್ಟಿದ್ದ 5ಲಕ್ಷ ರು. ಇಡಿಗಂಟನ್ನು ಅವರಿಗೇ ವಾಪಸ್ ನೀಡಿ ಪ್ರಮಾಣಿಕತೆಯ ಶಿಖರ ತಲುಪಿದ್ದಾನೆ. ಆದರೆ ಆತನ ಪ್ರಾಮಾಣಿಕತೆ ಬಗ್ಗೆ ಯಾರು ಏನೆನ್ನುತ್ತಾರೆ!? ಕೇಳೋಣ ಬನ್ನಿ. ನಿಜಕ್ಕೂ interesting ಆಗಿದೆ.

ಹಣ ಕಳೆದುಕೊಂಡ (ಮರಳಿ ಪಡೆದ) ಪ್ರಯಾಣಿಕ ಪವಮಾನಾಚಾರ್ಯರಿಗೆ 'ಪಾಂಡುರಂಗ ಮಹಾತ್ಮೆ'ಯನ್ನು ಬಣ್ಣಿಸಲು ಪದಗಳೇ ಇಲ್ಲ. ಆದರೆ ಕಥಾನಾಯಕ ಪಾಂಡುರಂಗ ಹೇಳುವುದೇನು ಅಂದರೆ ಅವರ ಮಾತುಗಳಲ್ಲೇ ಕೇಳಿ :

'ದುಡಿದು ತಿನ್ನಬೇಕು. ಪರರ ಸೊತ್ತು ಪಾಷಾಣಕ್ಕೆ ಸಮಾನ' ಎಂದು ಬಗೆದು ಹಣ ವಾಪಸ್ ಮಾಡಿದೆ. ಆದರೆ ಅದಕ್ಕೂ ಮುನ್ನ ಎಷ್ಟು ದಿನ ಅಂತ ಆಟೋ ಓಡಿಸ್ತೀಯಾ? ಅನಾಯಾಸಾವಾಗಿ ಸಿಕ್ಕಿದ ಹಣ ತೆಗೆದುಕೊಂಡು ಊರಿಗೆ ಹೋಗಿ ಆರಾಮಾಗಿ ಜೀವನ ನಡೆಸು ಎಂದು 'ಹಿತೈಷಿಗಳು' ಹೇಳಿದರು. ಆದರೆ ಮನಸು ದೃಢವಾಗಿ ನಿರ್ಧರಿಸಿತ್ತು. ಹಣ ಮರಳಿಸು ಎಂದು.

ಆಶ್ಚರ್ಯದ ಸಂಗತಿಯೆಂದರೆ ಒಬ್ಬ ಪೊಲೀಸಪ್ಪ ಹಣ ಯಾಕೆ ವಾಪಸ್ ಕೊಡ್ತೀಯಾ? ನನಗೊಂದು ಲಕ್ಷ ಕೊಟ್ಟು ಉಳಿದಿದ್ದನ್ನು ನೀನೇ ಇಟ್ಕೊಂಡು ಮಜಾ ಮಾಡು' ಎಂದು ಬಿಟ್ಟಿ ಸಲಹೆಯನ್ನೂ ನೀಡಿಬಿಟ್ಟ! ಆದರೆ ನನ್ನ ಮನಸು ಸುತರಾಂ ಒಪ್ಪಲಿಲ್ಲ. ತಾಯಿ ಶಕುಂತಲಾ ಮತ್ತು ಪತ್ನಿ ಪದ್ಮಾ ಸಹ ನನ್ನ ನಿರ್ಧಾರಕ್ಕೆ ಸಾಥ್ ನೀಡಿದರು ಎಂದು ಎದೆಯುಬ್ಬಿಸಿಕೊಂಡು ಪಾಂಡುರಂಗ ಹೇಳುತ್ತಾರೆ.

ಅಷ್ಟೇ ಅಲ್ಲ. ಬೆಳಗ್ಗಿನಿಂದ 'ಪಾಂಡುರಂಗ ಮಹಾತ್ಮೆ' talk of the town ಆಗಿದೆ. ಎಲ್ಲೆಲ್ಲೂ, ಎಲ್ಲರ ಬಾಯಲ್ಲೂ ಪಾಂಡುರಂಗ... ಪಾಂಡುರಂಗ! ಅದೆಲ್ಲ ಸರಿ ನೀವೇನನ್ನುತ್ತೀರಿ !? ವಸಿ ಹೇಳಿ, ಪಾಂಡುರಂಗ ಅಂತಹವರಿಗೆ ಕೇಳಿಸೋಣ. ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+