ದಾಂಪತ್ಯ ಕಲಹ, ಪತ್ನಿ ಮೇಲೆ ಶಂಕೆ, ಟೆಕ್ಕಿ ಆತ್ಮಹತ್ಯೆ

ಮಧ್ಯಪ್ರದೇಶ ಮೂಲದ ಕಮಲೇಶ್ ಶರ್ಮ(25) ಖಾಸಗಿ ಸಂಸ್ಥೆಯಲ್ಲಿ ಟೆಕ್ನಿಕಲ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದ. ಇತ್ತೀಚೆಗೆ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದೆ. ಸಾವಿನ ಕಾರಣ ಹುಡುಕುತ್ತಾ ಹೋದ ಪೊಲೀಸರಿಗೆ ಇದೊಂದು ದಾಂಪತ್ಯ ಕಲಹದ ಕೇಸ್ ಎಂದು ಸ್ಪಷ್ಟವಾಗಿದೆ.
ಸದಾ ಕೆಲಸ ಜಂಜಾಟದಲ್ಲಿರುತ್ತಿದ್ದ ಪತಿಯೊಂದಿಗೆ ಹೊಂದಾಣಿಕೆ ಸರಿಯಾಗಿ ಆಗದ ಕಾರಣ, ಶರ್ಮನನ್ನು ತೊರೆದ ಆತನ ಪತ್ನಿ ತವರಿನಲ್ಲಿ ನೆಲೆಸಿದ್ದಳು.
ಇದಕ್ಕೂ ಮುನ್ನ ಶರ್ಮ ಆಕೆ ಮೇಲೆ ಇಲ್ಲದ ಅನುಮಾನ ವ್ಯಕ್ತಪಡಿಸುತ್ತಾ ಸದಾ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ. ಪತ್ನಿ ತವರಿಗೆ ಹೋದ ಮೇಲೆ ಶರ್ಮಗೆ ಮಾನಸಿಕ ಯಾತನೆ ಹೆಚ್ಚಾಗಿದೆ.
ಸಾವಿಗೆ ನಿಖರ ಕಾರಣ ಏನು ಎಂದು ತಿಳಿಯದಿಲ್ಲವಾದರೂ, ಪತ್ನಿಯನ್ನು ಶಂಕಿಸಿದ ಪಾಪಪ್ರಜ್ಞೆ ಟೆಕ್ಕಿಗೆ ಕಾಡಿತ್ತಾ? ಆಥವಾ ಸಂಸಾರ ಜಂಜಾಟ ಸಾಕು ಎನಿಸಿ ಈ ಆತುರದ ಕ್ರಮ ಕೈಗೊಂಡಿದ್ದಾ? ಗೊತ್ತಿಲ್ಲ. ಆತುರದ ನಿರ್ಧಾರದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ.












Click it and Unblock the Notifications