ಕ್ಷೇತ್ರ ನೋಡಲು ಸುಂದರ...ಸಮಸ್ಯೆಯ ಆಗರ!

Udupi Chikmagalur Constituency
ಉಡುಪಿ/ಚಿಕ್ಕಮಗಳೂರು, ಜ.19: ಸಂಸತ್ತಿನ ಅವಧಿ ಇನ್ನೂ 30 ತಿಂಗಳು ಇರುವುದರಿಂದ ಮೂರು ಪಕ್ಷಗಳು ತೀವ್ರ ಸ್ಪರ್ಧೆಗಿಳಿಯುವುದು ಖಾತ್ರಿಯಾಗಿದೆ. ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರ ಮಲೆನಾಡು ಹಾಗೂ ಕರಾವಳಿ ಭಾಗದ ಸಮ್ಮಿಶ್ರವಾಗಿದ್ದು, ಕ್ಷೇತ್ರ ನೋಡಲು ಸುಂದರ.. ಆದರೆ ಸಮಸ್ಯೆಗಳ ಆಗರವಾಗಿದೆ.

ಈ ಸಂಸದೀಯ ಕ್ಷೇತ್ರವು ಎರಡೂ ಜಿಲ್ಲೆಗಳಿಂದ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ, ಕಾಪು, ಕಾರ್ಕಳ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಚಿಕ್ಕಮಗಳೂರು, ಶೃಂಗೇರಿ, ತರಿಕೆರೆ ಮತ್ತು ಮೂಡಿಗೆರೆ ಕ್ಷೇತ್ರಗಳನ್ನು ಒಳಗೊಂಡಿದೆ.

2008ರಲ್ಲಿ ಕ್ಷೇತ್ರ ಮರುವಿಗಂಡಣೆಯಾದಾಗ ಚಿಕ್ಕಮಗಳೂರು ಕ್ಷೇತ್ರದ ಜನತೆಯಿಂದ ಕೊಂಚ ಪ್ರತಿರೋಧ ಎದುರಾಗಿತ್ತು. ಸಂಸತ್ತಿಗೆ ಆಯ್ಕೆಯಾದ ಜನಪ್ರತಿನಿಧಿ ಕರಾವಳಿ ಭಾಗಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ದೂರು ದುಮ್ಮಾನ ಸಲ್ಲಿಸಬೇಕಾದರೆ 100 ಕಿ.ಮೀ ದೂರ ಸವೆಸಬೇಕು ಎಂಬ ಕೂಗು ಎದ್ದಿತ್ತು. ಆದರೆ,

ಅಡಕೆ, ಕಾಫಿ ಬೆಳೆಗಾರರು ಮತ್ತು ರೈತರ ಸಮಸ್ಯೆಗಳು, ನಕ್ಸಲ್ ನಿವಾರಣೆ, ರಸ್ತೆ ದುರಸ್ತಿ, ನಗರ ಪ್ರದೇಶಕ್ಕೆ ಕುಡಿಯುವ ನೀರು, ರೈಲು ಯೋಜನೆ, ಕಡಲ್ಕೊರೆತ, ಮುಂತಾದ ಸಮಸ್ಯೆಗಳಿಗೆ ಇಲ್ಲಿವರೆಗೂ ಬಂದ ಸಂಸದರು ನೀಡಿರುವ ಆಶ್ವಾಸನೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಕ್ಷೇತ್ರದ ಜನತೆ ಆಕ್ರೋಶವ್ಯಕ್ತಪಡಿಸಿದ್ದಾರೆ.

ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ, ಬಿಲ್ಲವ ಸಮುದಾಯ, ಬ್ರಾಹ್ಮಣ, ಬಂಟ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಹತ್ತು ಹಲವು ಜಾತಿ ಮತಗಳು ಈ ಕ್ಷೇತ್ರದಲ್ಲಿ ಪ್ರಮುಖವಾಗಿದೆ. ಒಕ್ಕಲಿಗ ಹಾಗೂ ಬಿಲ್ಲವ ಸಮುದಾಯ ಮತ ಒಲಿಸಿಕೊಂಡರೆ ಎರಡೂ ಜಿಲ್ಲಯಲ್ಲಿ ಪಾರುಪತ್ಯ ನಡೆಸಬಹುದು ಎಂಬ ಎಣಿಕೆ ಎಲ್ಲಾ ಪಕ್ಷಗಳನ್ನು ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+