ತಂದೆ ಬಗ್ಗೆ ಕುಮಾರ್ ಬಂಗಾರಪ್ಪಗೆ ಅಭಿಮಾನ ಇದ್ದಿದ್ದರೆ

ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಬಂಗಾರಪ್ಪ ಅಭಿಮಾನಿಗಳು ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂದೆ ಬದುಕಿದ್ದಾಗ ಇಲ್ಲಸಲ್ಲದ ಆರೋಪ ಮಾಡಿ ಮನಬಂದಂತೆ ಮಾತನಾಡಿದವರು, ಈಗ ಧಾರ್ಮಿಕ ಸಂಪ್ರದಾಯ ಅರಿಯದೇ ಹಿರಿಯ ಮಗನ ಕರ್ತವ್ಯ ಮಾಡುತ್ತಿದ್ದೇನೆ ಎಂದು ಸಾರ್ವಜನಿಕರೆದುರು ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ.
ಕುಮಾರ್ ಬಂಗಾರಪ್ಪಗೆ ತಂದೆಯ ಬಗ್ಗೆ ನಿಜವಾದ ಅಭಿಮಾನ ಇದ್ದಿದ್ದರೆ ತಂದೆಯ ಕೊನೆಯ ದಿನಗಳಲ್ಲಿ ಜೊತೆಗಿದ್ದು, ಅವರ ಮಾತುಗಳನ್ನು ಪಾಲಿಸುತ್ತಿದ್ದರು ಎಂದು ವಾಗ್ಧಾಳಿ ನಡೆಸಿದರು.
ಜೆಡಿಎಸ್ ಮುಖಂಡ ಶ್ರೀಪಾದ ಹೆಗಡೆ ನಿಸರಾಣಿ ಮಾತನಾಡಿ, ಬಂಗಾರಪ್ಪರಿಂದ ರಾಜಕೀಯಕ್ಕೆ ಬಂದು ಅಧಿಕಾರ ಪಡೆದ ಹಾಲಪ್ಪ ಹಾಗೂ ಕುಮಾರ್ ಬಂಗಾರಪ್ಪ, ಅವರ ಋಣ ತೀರಿಸಬೇಕೆಂದರೆ ಮಧು ಬಂಗಾರಪ್ಪ ಅವರನ್ನು ಶಾಸಕರನ್ನಾಗಿ ಮಾಡಲಿ ಎಂದರು.












Click it and Unblock the Notifications