ಕರ್ನಾಟಕ ಬಿಕ್ಕಟ್ಟು, 'ಅನಂತ' ಮೌನ ಏಕೆ?

ಪಕ್ಷದ ಕಚೇರಿಯಲ್ಲಿ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ರಾಜ್ಯ ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಅನಂತ್ ಯಾವುದೇ ಉತ್ತರ ಹೇಳದೆ ಮೌನ ವಹಿಸಿದರು.
ಆಂತರಿಕ ಬಿಕ್ಕಟ್ಟು, ಸಂಪುಟ ವಿಸ್ತರಣೆ, ಯಡಿಯೂರಪ್ಪ ಪ್ರವಾಸ ಯಾವ ವಿಷಯದ ಬಗ್ಗೆ ಕೂಡಾ ಅನಂತ್ ಮಾತನಾಡಲು ಬಯಸಲಿಲ್ಲ.
ಕಾರ್ಯಕಾರಿ ಸಮಿತಿ ಉದ್ಘಾಟನಾ ಭಾಷಣದಲ್ಲೂ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ಬಗ್ಗೆ ಮಾತ್ರ ಅನಂತ್ ಮಾತನಾಡಿದರು.
ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಮೀಸಲಾತಿ ಒದಗಿಸುವ ಕೇಂದ್ರ ಸರ್ಕಾರದ ನೀತಿ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಅನಂತ್ ಹೇಳಿದರು. ಆದರೆ, ರಾಜ್ಯದ ಬಿಕ್ಕಟ್ಟಿನ ಬಗ್ಗೆ ಅನಂತ್ ಮೌನ ಏಕೆ ವಹಿಸಿದ್ದಾರೆ? ಹೈ ಕಮಾಂಡ್ ನಿಂದ ಅವರಿಗೆ ಯಾವುದಾದರೂ ವಿಶೇಷ ಸೂಚನೆ ನೀಡಾಗಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಗಬೇಕಿದೆ.












Click it and Unblock the Notifications